ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಕಾಲ ಭೈರವೇಶ್ವರನಿಗೆ ಅಮವಾಸ್ಯೆ ಪೂಜೆ ನಡೆಸ್ತಿದ್ದಾರೆ. ಈಗಾಗಲೇ ಆದಿ ಚುಂಚನಗಿರಿ ಕ್ಷೇತ್ರದ ಕಾಲ ಭೈರವೇಶ್ವರನಿಗೆ ಎರಡು ಅಮವಾಸ್ಯೆ ಪೂಜೆ ನೆರವೇರಿಸಿದ್ದು, ಇಂದು ಮೂರನೇ ಅಮವಾಸ್ಯೆ ಪೂಜೆಗಾಗಿ ಶ್ರೀ ಕ್ಷೇತ್ರ ಚುಂಚನಗಿರಿಗೆ ದಂಪತಿ ಸಮೇತರಾಗಿ ಆಗಮಿಸಿದ್ದಾರೆ.
ಮಂಡ್ಯ (ಫೆ.26): ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ದೇವರ ಮೊರೆ ಹೋಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಕಾಲ ಭೈರವೇಶ್ವರನಿಗೆ ಅಮವಾಸ್ಯೆ ಪೂಜೆ ನಡೆಸ್ತಿದ್ದಾರೆ. ಈಗಾಗಲೇ ಆದಿ ಚುಂಚನಗಿರಿ ಕ್ಷೇತ್ರದ ಕಾಲ ಭೈರವೇಶ್ವರನಿಗೆ ಎರಡು ಅಮವಾಸ್ಯೆ ಪೂಜೆ ನೆರವೇರಿಸಿದ್ದು, ಇಂದು ಮೂರನೇ ಅಮವಾಸ್ಯೆ ಪೂಜೆಗಾಗಿ ಶ್ರೀ ಕ್ಷೇತ್ರ ಚುಂಚನಗಿರಿಗೆ ದಂಪತಿ ಸಮೇತರಾಗಿ ಆಗಮಿಸಿದ್ದಾರೆ.
ಈ ವೇಳೆ ದೇವಸ್ಥಾನದ ಸಂಪ್ರದಾಯದಲ್ಲಿ ಪೂರ್ಣ ಕುಂಭ ಕಳಸದೊಂದಿಗೆ ದೇವೇಗೌಡ ದಂಪತಿಗಳನ್ನು ಮಠದ ವತಿಯಿಂದ ಸ್ವಾಗತಿಸಲಾಯ್ತು. ಶ್ರೀ ಕ್ಷೇತ್ರದ ಶ್ರೀ ನಿರ್ಮಲಾನಂದ ಸ್ವಾಮಿಜಿಗಳ ನೇತೃತ್ವದಲ್ಲಿ ಅಮವಾಸ್ಯೆಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.