ಮಾಜಿ ಪ್ರಧಾನಿ ಎಚ್​ ಡಿ. ದೇವೇಗೌಡ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಹಾಸನ ಬೂಕನಬೆಟ್ಟದಲ್ಲಿ ರಂಗನಾಥನ ದರ್ಶನ ಪಡೆದ ದೇವೇಗೌಡ ಯುದ್ಧಕ್ಕೆ ಇಳಿಯುವ ಸಮಯ ಬಂದಿದೆ ಎಂದು ಹೇಳಿ ಉಭಯ ಪಕ್ಷಗಳ ನಾಯಕರಿಗೆ ಟಾಂಗ್​ ನೀಡಿದರು.

ಹಾಸನ: ಮಾಜಿ ಪ್ರಧಾನಿ ಎಚ್​ ಡಿ. ದೇವೇಗೌಡ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.

ಹಾಸನ ಬೂಕನಬೆಟ್ಟದಲ್ಲಿ ರಂಗನಾಥನ ದರ್ಶನ ಪಡೆದ ದೇವೇಗೌಡ ಯುದ್ಧಕ್ಕೆ ಇಳಿಯುವ ಸಮಯ ಬಂದಿದೆ ಎಂದು ಹೇಳಿ ಉಭಯ ಪಕ್ಷಗಳ ನಾಯಕರಿಗೆ ಟಾಂಗ್​ ನೀಡಿದರು.

ದೇವರ ಆಶೀರ್ವಾದ ಇದ್ದರೆ, ಕೊರಡು ಕೊನರು ಕೊನರುತ್ತೆ, ಹಾಗೆಯೇ ದೈವದ ಬಲ ಇದ್ದರೆ, ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಮಾರ್ಮಿಕವಾಗಿ ದೇವೇಗೌಡರು ತಿಳಿಸಿದರು. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಉಭಯ ಪಕ್ಷಗಳ ನಾಯಕರಿಗೆ ದೇವೇಗೌಡ ಟಾಂಗ್​ ನೀಡಿದರು.