ನವದೆಹಲಿ: ಹಿಂದೂಸ್ಥಾನ್‌ ಮೆಷಿನ್‌ ಟೂಲ್ಸ್‌(ಎಚ್‌ಎಂಟಿ)ಯ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಈಗ ಇರುವ 58ರಿಂದ 60ಕ್ಕೆ ಏರಿಸಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕೇಂದ್ರದ ಭಾರಿ ಉದ್ದಿಮೆಗಳ ಸಚಿವ ಅನಂತ್‌ ಗೀತೆ ಅವರಿಗೆ ಮನವಿ ಮಾಡಿದ್ದಾರೆ. 

ದೆಹಲಿಯಲ್ಲಿ ಗುರುವಾರ ಸಚಿವ ಗೀತೆ ಅವರನ್ನು ಭೇಟಿಯಾದ ದೇವೇಗೌಡರು, ಎಚ್‌ಎಂಟಿ ನೌಕರರಿಗೆ 2007ರ ಪರಿಷ್ಕೃರಿಸಲಾದ ವೇತನವನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.

(ಸಾಂದರ್ಬಿಕ ಚಿತ್ರ)