ಕಾಪು: ದೇವೇ ಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರು ಶುಕ್ರವಾರ ಉಡುಪಿ ತಾಲೂಕಿನ ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮೊಮ್ಮಗನ ಮದುವೆಯ ಆಮಂತ್ರಣ ಪತ್ರವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. 

ಪ್ರಕೃತಿ  ಚಿಕಿತ್ಸೆಗಾಗಿ ಇಲ್ಲಿನ ಮೂಳೂರು ರೆಸಾರ್ಟ್‌ಗೆ ಗುರುವಾರ ಆಗಮಿಸಿರುವ ದೇವೇಗೌಡರು ಶುಕ್ರವಾರ ಅಮೃತೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆಯಲ್ಲಿ ಭಾಗಿಯಾದರು. 

ದೇವೇಗೌಡರ ಕಿರಿಯ ಪುತ್ರಿ ಶೈಲಜಾ ಅವರ ಪುತ್ರ ಅಮೋಘ ಮದುವೆಯ ಆಮಂತ್ರಣ ಪತ್ರಿಕೆಯನ್ನು ಶ್ರೀದೇವಿಯ ಪಾದದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು.