ರೋಹಿತ್ ವೆಮುಲಾ ಎಂಬ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಬಳಿಕ ದೇಶದಾದ್ಯಂತ ಚರ್ಚೆಗೊಳಗಾಗಿದ್ದ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸುಂಕಣ್ಣ ವೆಲ್ಪುಲಾ ಎಂಬ ಸಂಶೋಧನಾ ವಿದ್ಯಾರ್ಥಿ ವಿಶ್ವವಿದ್ಯಾಲಯದ 18ನೇ ಘಟೀಕೋತ್ಸವದಲ್ಲಿ ಉಪಕುಲಪತಿ ಅಪ್ಪರಾವ್ ಅವರಿಂದ ಡಾಕ್ಟರೇಟ್ ಪದವಿಯನ್ನು ಪಡೆಯಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಪ್ರೊ. ಅಪ್ಪರಾವ್, ಸಹ ುಪ-ಕುಲಪತಿ ವಿಪಿನ್ ಶ್ರಿವಾಸ್ತವ್ ಅವರನ್ನು ಕರೆದು ಪದವಿ ಪ್ರಧಾನ ಮಾಡಿಸಿರುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

ರೋಹಿತ್ ವೆಮುಲಾ ಜತೆ ವಿವಿಯಿಂದ ಅಮಾನತುಗೊಳಿಸಲ್ಪಟ್ಟ ಇತರ ಮೂವರಲ್ಲಿ ಸುಂಕಣ್ಣ ವೆಲ್ಪುಲಾ ಕೂಡಾ ಓರ್ವನಾಗಿದ್ದಾನೆ. ರೋಹಿತ್ ವೆಮುಲಾ ಆತ್ಮಹತ್ಯೆಗೆ ವಿವಿ ಕುಲಪತಿ ಅಪ್ಪರಾವ್ ಕೂಡಾ ಹೊಣೆಗಾರರು ಎಂಬ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದರು.