ಬೆಂಗಳೂರು(ನ.22): ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಆಚರಣೆ ನಿಷೇಧಿಸಿ ರಾಜ್ಯ ಉಚ್ಚನ್ಯಾಯಾಲಯದ ವಿಭಾಗೀಯ ಪೀಠ ಮಹತ್ತರ ಆದೇಶ ನೀಡಿದೆ.

ಕಂಬಳವನ್ನು ನಿಷೇಧಿಸಬೇಕು ಎಂದು ಪ್ರಾಣಿದಯಾ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ, ಉಡುಪಿ, ದಕ್ಷಿಣಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ನಡೆಸಲಾಗುವ ಕಂಬಳಕ್ಕೆ ಬ್ರೇಕ್ h.

ಕೆಲದಿನಗಳ ಹಿಂದಷ್ಟೇ ಕಂಬಳ ನಡೆಸಲು ಹೈಕೋರ್ಟ್ ಷರತ್ತುಬದ್ಧ ಆದೇಶ ಹೊರಡಿಸಿತ್ತು. ಆದರೆ ಇಂದು ಎಸ್.ಕೆ ಮುಖರ್ಜಿಯವರಿದ್ದ ನ್ಯಾಯಪೀಠವು 'ಕಂಬಳದಲ್ಲಿ ಬಳಸುವ ಪ್ರಾಣಿಗಳಿಗೆ ಹಿಂಸೆಯಾಗುತ್ತಿದೆ' ಎಂಬ ವಾದವನ್ನು ಮನ್ನಿಸಿ ಈ ಮಹತ್ತರ ತೀರ್ಪು ಪ್ರಕಟಿಸಿದೆ.

ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು ಇಲ್ಲಿ ಸ್ಮರಿಸಬಹುದು..