ಹಳೆಯ 2 ಆದೇಶಕ್ಕೆ ವ್ಯತಿರಿಕ್ತವಾದ ಆದೇಶ ನೀಡಿದ ಹೈಕೋರ್ಟ್‌ | ಕೇಸು ದಾಖಲಿಸದೇ ಹಣ ಜಪ್ತಿ ಮಾಡಿದ್ದ ಕೇಸ್‌ನಲ್ಲಿ ಆರೋಪಿಯ ಅರ್ಜಿ ವಜಾ
‘ಯಾವುದೇ ಪ್ರಕರಣದ ಕುರಿತು ಮಾಹಿತಿ ಪಡೆದ ಕೂಡಲೇ ಎಫ್ಐಆರ್ ದಾಖಲಿಸ ಬೇಕು. ಆ ನಂತರವಷ್ಟೇ ತನಿಖೆ ಕೈಗೊಳ್ಳಬೇಕು. ಎಫ್ಐಆರ್ ದಾಖಲಿಸದೆ ನಡೆಸಿದ ತನಿಖೆ ಕಾನೂನಿನಲ್ಲಿ ಅಮಾನ್ಯ' ಎಂಬ ಕೆಲ ವರ್ಷಗಳ ಹಿಂದಿನ ತನ್ನ ಆದೇಶಕ್ಕೆ ವಿರುದ್ಧವಾದ ಆದೇಶ ವನ್ನು ಹೈಕೋರ್ಟ್ ಇದೀಗ ಪ್ರಕಟಿಸಿದೆ.
ಹೌದು. ವಿಚಾರಣಾಧಿಕಾರಿ ಅಥವಾ ತನಿಖಾಧಿಕಾರಿಯು ಯಾವುದಾದರೂ ವಿಚಾ ರದ ಬಗ್ಗೆ ಪ್ರಥಮ ಮಾಹಿತಿ ಅಥವಾ ದೂರು ಸ್ವೀಕರಿಸಿದಾಗ, ಅದರಲ್ಲಿ ಪ್ರಜ್ಞಾಪೂರ್ವಕ ಅಪರಾಧ ಕೃತ್ಯ ನಡೆದಿರುವುದು ಕಂಡುಬಂದರೆ ಕೂಡಲೇ ಪ್ರಕರಣ (ಎಫ್ಐಆರ್) ದಾಖಲಿಸು ವುದು ಕಡ್ಡಾಯ. ಒಂದೊಮ್ಮೆ ಪ್ರಕರಣದ ಸತ್ಯಾಸತ್ಯತೆ ಖಚಿತವಾಗಿರದ ಹಾಗೂ ಗೊಂದಲ ಇದ್ದ ಪಕ್ಷದಲ್ಲಿ ಪೊಲೀಸ್ ಅಧಿಕಾರಿಯು ಪ್ರಾಥಮಿಕ ವಿಚಾರಣೆ ನಡೆಸಬೇಕು. ಆ ವೇಳೆ ಪ್ರಜ್ಞಾಪೂರ್ವಕ ಅಪ ರಾಧ ಕೃತ್ಯ ನಡೆದಿರುವ ಬಗ್ಗೆ ತೃಪ್ತಿಯಾದರೆ ಎಫ್ಐಆರ್ ದಾಖಲಿಸಿ ವಿಚಾರಣೆ ಮುಂದುವರಿಸಬಹುದು. ಆ ಪ್ರಾಥಮಿಕ ವಿಚಾರಣೆಯನ್ನು ಪ್ರಾಥಮಿಕ ತನಿಖೆ ಎಂದು ಭ್ರಮಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?: ಬೆಂಗಳೂರಿನ ಲೋಕಾ ಯುಕ್ತ ಎಡಿಜಿಪಿ ಅವರು 2014ರಲ್ಲಿ ಚಿತ್ರ ದುರ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಧಾರವಾಡದಿಂದ ಬೆಂಗಳೂರಿಗೆ ಕಾರೊಂದ ರಲ್ಲಿ ದೊಡ್ಡ ಮೊತ್ತದ ಹಣ ಸಾಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿ, ಆ ಕುರಿತು ಕೂಡಲೇ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಚಿತ್ರದುರ್ಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಮ್ಮ ಸಿಬ್ಬಂದಿಯೊಂದಿಗೆ ತೆರಳಿ, ಕಾರು ತಡೆದಿದ್ದರು. ಆಗ ಪ್ರಕರಣದ ಅರ್ಜಿದಾರ ಚಂದ್ರಶೇಖರ ಎಲಿಗಾರ್ ಎಂಬುವರು ಕಾರಿನಲ್ಲಿ 36,85,500 ರು. ಸಾಗಿಸುತ್ತಿದ್ದುದು ಕಂಡುಬಂದಿತ್ತು. ಆ ವೇಳೆ, ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸದೇ ಪ್ರಾಥಮಿಕ ತನಿಖೆ ನಡೆಸಿ ಹಣ ಹಾಗೂ ಕಾರು ಜಪ್ತಿ ಮಾಡಿದ್ದರು. ನಂತರ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಬಳಿಗೆ ತೆರಳಿ ದೂರು ದಾಖಲಿ ಸಿದ್ದರು. ಬಳಿಕ ತನಿಖೆ ನಡೆಸಲಾಗಿತ್ತು. ಅರ್ಜಿದಾರರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಫ್ಐಆರ್ ದಾಖಲಿಸದೆ ಯಾವುದೇ ಪ್ರಕರಣದ ತನಿಖೆ ನಡೆಸುವಂತಿಲ್ಲ. ಎಫ್ಐಆರ್ ದಾಖಲಿಸುವ ಮುನ್ನವೇ ತನಿಖೆಯ ಕೆಲ ಪ್ರಕ್ರಿಯೆ ಪೂರೈಸಬೇಕು. ಹೀಗಾಗಿ, ತಮ್ಮ ವಿರುದ್ಧ ದಾಖಲಿಸಿದ ಎಫ್ಐಆರ್ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಪಡಿಸುವಂತೆ ಕೋರಿದ್ದರು. ಈ ವಾದವನ್ನು ಲೋಕಾಯುಕ್ತ ಪೊಲೀಸರ ಪರ ವಕೀಲರು ಆಕ್ಷೇಪಿಸಿದ್ದರು.
ಎಫ್ಐಆರ್ ದಾಖಲಿಸಿ ತನಿಖೆ ನಡೆಸ ಬಹುದು: ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಚಂದ್ರಶೇಖರ್ ಎಲಿಗಾರ್ ಪ್ರಕರಣದಲ್ಲಿ ದೊಡ್ಡಮೊತ್ತದ ಹಣ ರವಾನೆಯಾಗುತ್ತಿದೆ ಎಂದು ಲೋಕಾಯುಕ್ತ ಎಡಿಜಿಪಿಯವರು ಹೇಳಿದ್ದರಷ್ಟೆ. ಅದನ್ನು ಬಿಟ್ಟು ಬೇರಾರಯವುದೇ ಮಾಹಿತಿ ಇರಲಿಲ್ಲ. ಇದರಿಂದ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಹೋಗಿ ಕಾರು ಶೋಧಿ ಸಿದ್ದರು. ಹಣಕ್ಕೆ ಅರ್ಜಿದಾರರು ಸೂಕ್ತ ವಿವರಣೆ ಕೊಡದ ಹಿನ್ನೆಲೆಯಲ್ಲಿ ಹಣ ಮತ್ತು ವಾಹನ ಜಪ್ತಿ ಮಾಡಿದ್ದರು. ಬಳಿಕ ವಿಳಂಬ ಮಾಡದೆ ಸಂಬಂಧಪಟ್ಟಲೋಕಾಯುಕ್ತ ಪೊಲೀಸರ ಮುಂದೆ ಹೋಗಿ ಎಫ್ಐಆರ್ ದಾಖಲಿಸಿದ್ದಾರೆ. ಹೀಗಾಗಿ, ಪೊಲೀಸ್ ವರಿಷ್ಠಾಧಿಕಾರಿಯ ನಡಾವಳಿಯು ಪ್ರಾಥಮಿಕ ತನಿಖೆಯಾಗು ವುದಿಲ್ಲ. ಅದು ಕೇವಲ ಪ್ರಾಥಮಿಕ ವಿಚಾರಣೆ ಯಷ್ಟೆ. ತದನಂತರ ತನಿಖಾಧಿಕಾರಿಯು ಅರ್ಜಿ ದಾರರು ಹೇಗೆ ಇಷ್ಟುದೊಡ್ಡ ಮೊತ್ತ ಹೊಂದಿ ದ್ದರು ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಆದ್ದರಿಂದ ಎಫ್ಐಆರ್ ದಾಖಲೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಅರ್ಜಿ ವಜಾಗೊಳಿಸಿತು. (ಕನ್ನಡಪ್ರಭ)
