ನಲಪಾಡ್'ಗೆ ಜೈಲೆ ಗತಿ: ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

First Published 14, Mar 2018, 2:43 PM IST
HC Dismiss Nalapad Bail petition
Highlights

ವಿದ್ವತ್ ಮೇಲೆ ಫೆ.17ರಂದು ನಲಪಾಡ್ ಹಾಗೂ ಆತನ ಗ್ಯಾಂಗ್ ವಜಾಗೊಳಿಸಿದೆ.   

ಬೆಂಗಳೂರು(ಮಾ.14): ಉದ್ಯಮಿಯೊಬ್ಬರ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಶಾಸಕ ಎನ್.ಎ. ಹ್ಯಾರೀಸ್ ಅವರ ಪುತ್ರ ಮೊಹಮದ್ ನಲಪಾಡ್' ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿಸದೆ. ವಿದ್ವತ್ ಮೇಲೆ ಫೆ.17ರಂದು ನಲಪಾಡ್ ಹಾಗೂ ಆತನ ಗ್ಯಾಂಗ್ ವಿದ್ವತ್ ಮೇಲೆ ಯುಬಿ ಸಿಟಿಯ ಫರ್ಜಿ ಕಫೆಯಲ್ಲಿ ಹಲ್ಲೆ ನಡೆಸಿದ್ದರು. ನಲಪಾಡ್ ಪರ ಖ್ಯಾತ ವಕೀಲ ಸಿ.ವಿ.ನಾಗೇಶ್ ಕುಮಾರ್ ವಾದ ಮಂಡಿಸಿದ್ದರೆ, ವಿದ್ವತ್ ಪರ ಶ್ಯಾಮ್ ಸುಂದರ್ ಸರ್ಕಾರಿ ಅಭಿಯೋಜಕರಾಗಿದ್ದರು. ಕೋರ್ಟ್ ಸಿಸಿ ದೃಶ್ಯಾವಳಿ ಮೇಲೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ತನಿಖಾಧಿಕಾರಿಗಳಿಗೆ ಸಿಗದ ವೈದ್ಯಕೀಯ ವರದಿ ನಲಪಾಡ್ ಪರ ವಕೀಲರಿಗೆ ಸಿಕ್ಕಿದ್ದೇಗೆ ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ. 2 ದಿನಗಳ ಹಿಂದಷ್ಟೆ ಎರಡೂ ಕಡೆಯ ವಕೀಲರು ತಮ್ಮ ವಾದ ಮಂಡಿಸಿದ್ದರು.  ಸೆಷನ್ಸ್ ಕೋರ್ಟ್'ನಲ್ಲೂ ಜಾಮೀನು ಅರ್ಜಿ ವಜಾಗೊಳಿಸಲಾಗಿತ್ತು.

loader