Asianet Suvarna News Asianet Suvarna News

ಬೈಕ್, ಕಾರು ಹೊಂದಿರುವವರು ಬಡವರಲ್ಲ; ತೈಲ ಬೆಲೆಯೇರಿಕೆಯನ್ನು ಭರಿಸಬೇಕು: ಕೇಂದ್ರ ಸಚಿವರಿಂದ ವಿವಾದಿತ ಹೇಳಿಕೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಯಾವಾಗಲೂ ಚರ್ಚಾಸ್ಪದ ವಿಚಾರ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ ಜೆ ಅಲ್ಫೋನ್ಸ್ ವಿವಾದಾತ್ಪದ ಹೇಳಿಕೆ ನೀಡಿದ್ದಾರೆ. ಬೈಕ್, ಕಾರುಗಳನ್ನು ಹೊಂದಿರುವವರೆಲ್ಲಾ ಹಸಿವಿನಿಂದ ಬಳಲುವವರಲ್ಲ. ಯಾರಿಗೆ ವಾಹನಗಳು ಬೇಕೋ ಅವರು ಬೆಲೆ ಏರಿಕೆಯನ್ನು ಭರಿಸಬೇಕು ಎಂದಿದ್ದಾರೆ.

Have a vehicle Can afford fuel hike then Union minister Alphons adds to row

ನವದೆಹಲಿ (ಸೆ.16): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಯಾವಾಗಲೂ ಚರ್ಚಾಸ್ಪದ ವಿಚಾರ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ ಜೆ ಅಲ್ಫೋನ್ಸ್ ವಿವಾದಾತ್ಪದ ಹೇಳಿಕೆ ನೀಡಿದ್ದಾರೆ. ಬೈಕ್, ಕಾರುಗಳನ್ನು ಹೊಂದಿರುವವರೆಲ್ಲಾ ಹಸಿವಿನಿಂದ ಬಳಲುವವರಲ್ಲ. ಯಾರಿಗೆ ವಾಹನಗಳು ಬೇಕೋ ಅವರು ಬೆಲೆ ಏರಿಕೆಯನ್ನು ಭರಿಸಬೇಕು ಎಂದಿದ್ದಾರೆ.

ಬಡವರು ಘನತೆಯ ಜೀವನ ನಡೆಸಲು ಸಹಾಯಕವಾಗಲು ಕೇಂದ್ರ ಸರ್ಕಾರ ತೆರಿಗೆಯನ್ನು ವಿಧಿಸುತ್ತದೆ. ತೈಲ ಬೆಲೆ ಏರಿಕೆ ಬಗ್ಗೆ ಯಾವಾಗಲೂ ಟೀಕಿಸುವವರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಇದರಿಂದ ದೇಶಕ್ಕೆ ಅನುಕೂಲವಾಗಲಿದೆ ಎಂದು ತೈಲ ಬೆಲೆಯೇರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಾರು ಮತ್ತು ಬೈಕುಗಳನ್ನು ಹೊಂದಿರುವವರ ಮೇಲೆ ನಾವು ತೆರಿಗೆಯನ್ನು ಹಾಕುತ್ತಿದ್ದೇವೆ. ಅವರೆಲ್ಲಾ ಬಡವರಲ್ಲ. ಯಾರಿಗೆ ಪಾವತಿಸಲು ಸಾಧ್ಯವಿದೆಯೋ ಅವರು ಪಾವತಿಸಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫನ್ಸ್ ಹೇಳಿದ್ದಾರೆ.

ಕಳೆದ 3 ವರ್ಷಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಶೇ.50 ರಷ್ಟು ಇಳಿಕೆಯಾಗಿದೆ. ಆದರೂ ಭಾರತದಲ್ಲಿ ಬೆಲೆ ಮಾತ್ರ ಕಡಿಮೆಯಾಗಿಲ್ಲ.  ಇಂತಹ ಸಮಯದಲ್ಲಿ ಅಲ್ಫನ್ಸ್ ಹೇಳಿಕೆ ವಿವಾದಕ್ಕೆ ಎಡೆಯಾಗಿದೆ. ಪ್ರತಿಪಕ್ಷಗಳು ಇವರ ಹೇಳಿಕೆಯನ್ನು ಖಂಡಿಸಿದೆ.

Follow Us:
Download App:
  • android
  • ios