ಬೆಂಗಳೂರು[ಮೇ. 24] ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ಬೆಳಗ್ಗೆ ತಾತ ದೇವೇಗೌಡರಿಗೆ ಸ್ಥಾನ ಬಿಟ್ಟುಕೊಡಲು ಸಂಸದ ಸ್ಥಾನಕ್ಕೆ  ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು.

ಹಾಸನದಲ್ಲಿ ಜಯಭೇರಿ ಬಾರಿಸಿದ ಪ್ರಜ್ವಲ್ ‘ಸರಳ’ ನಿರ್ಧಾರ!

ರಾಜೀನಾಮೆ ನಿರ್ಧಾರ ಹೊತ್ತ ಪ್ರಜ್ವಲ್ ಶುಕ್ರವಾರ ಸಂಜೆ ಮಾಜಿ ಸಿಎಂ, ದೋಸ್ತಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಹಾಸನದಿಂದ ಸ್ಪರ್ಧೆ ಮಾಡಿ ಚುನಾವಣಾ ಪ್ರಚಾರದ ಭರಾಟೆ ವೇಳೆಯೂ ಪ್ರಜ್ವಲ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರಚಾರಕ್ಕೆ ಆಗಮಿಸಲು ಮನವಿ ಮಾಡಿಕೊಂಡಿದ್ದರು. ನಂತರ ಸಿದ್ದರಾಮಯ್ಯ ಹಾಸನಕ್ಕೆ ತೆರಳಿ ಪ್ರಚಾರ ಮಾಡಿದ್ದರು.

ಪ್ರಜ್ವಲ್  ರೇವಣ್ಣ ರಾಜೀನಾಮೆ ವದಂತಿ ಸಹಜವಾಗಿಯೇ ಜೆಡಿಎಸ್ ಪಾಳಯದಲ್ಲಿಯೇ ಸಂಚಲನ ಮೂಡಿಸಿತ್ತು. ಇನ್ನೊಂದು ಕಡೆ ಲೋಕಸಭಾ ಚುನಾವಣೆ ಜವಾಬ್ದಾರಿ ವಹಿಸಿಕೊಂಡಿದ್ದ ಜೆಡಿಎಸ್ ಸಚಿವರು ಮತ್ತು ರಾಜ್ಯಾಧ್ಯಕ್ಷ ವಿಶ್ವನಾಥ್ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿತ್ತು. ಇದೆಲ್ಲದರ ನಡುವೆ ಸಿದ್ದರಾಮಯ್ಯ ಮತ್ತು ಪ್ರಜ್ವಲ್ ಭೇಟಿಯಾಗಿದ್ದು ರಾಜಕಾರಣದ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ.