ರಾಜಕಾರಣದಲ್ಲಿ ಇರುವವರು ಮಾತನಾಡುವಾಗ ಎಚ್ಚರದಿಂದಿರಬೇಕು. ಅದರಲ್ಲೂ ಸಾರ್ವಜನಿಕವಾಗಿ ಹೇಳಿಕೆ ಕೊಡುವಾಗ ಹುಶಾರಾಗಿರಬೇಕು. ಏನೋ ಮಾತಾಡುವುದಕ್ಕೆ ಹೋದರೆ ತಲೆದಂಡ ಕೊಡಬೇಕಾಗಿ ಬರಬಹುದು. ಒಂದು ಹೇಳಿಕೆ ಜಮ್ಮು ಕಾಶ್ಮೀರ ವಿತ್ತ ಸಚಿವ ಹಾಸೀಬ್ ದ್ರಾಬು ತಲೆದಂಡವಾಗಿ ಪರಿಣಮಿಸಿದೆ.
ನವದೆಹಲಿ (ಮಾ. 12): ರಾಜಕಾರಣದಲ್ಲಿ ಇರುವವರು ಮಾತನಾಡುವಾಗ ಎಚ್ಚರದಿಂದಿರಬೇಕು. ಅದರಲ್ಲೂ ಸಾರ್ವಜನಿಕವಾಗಿ ಹೇಳಿಕೆ ಕೊಡುವಾಗ ಹುಶಾರಾಗಿರಬೇಕು. ಏನೋ ಮಾತಾಡುವುದಕ್ಕೆ ಹೋದರೆ ತಲೆದಂಡ ಕೊಡಬೇಕಾಗಿ ಬರಬಹುದು. ಒಂದು ಹೇಳಿಕೆ ಜಮ್ಮು ಕಾಶ್ಮೀರ ವಿತ್ತ ಸಚಿವ ಹಾಸೀಬ್ ದ್ರಾಬು ತಲೆದಂಡವಾಗಿ ಪರಿಣಮಿಸಿದೆ.
ವಿತ್ತ ಸಚಿವ ಹಾಸೀಬ್ ದ್ರಾಬು ಜಮ್ಮು ಕಾಶ್ಮೀರ ಒಂದು ರಾಜಕೀಯ ವಿಚಾರವೇ ಅಲ್ಲ. ಕಳೆದ 50-70 ವರ್ಷಗಳಿಂದ ಸುಮ್ಮನೆ ಇದನ್ನೊಂದು ರಾಜಕೀಯ ವಿಚಾರವನ್ನಾಗಿ ಮಾಡಿ ಕೂಗು ಎಬ್ಬಿಸಲಾಗಿದೆ. ಏನೇ ಮಾಡಿದರೂ ಇಲ್ಲಿನ ರಾಜಕೀಯ ಪರಿಸ್ಥಿತಿ ಬದಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯೇ ದ್ರಾಬು ಅವರಿಗೆ ಮುಳುವಾಯಿತು. ತಮ್ಮ ಬಾಯಿ ತಪ್ಪಿನಿಂದಾಗಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು. ಪಿಡಿಪಿ ವಕ್ತಾರ ರಫಿ ಅಹ್ಮದ್ ದ್ರಾಬು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಕೂಡಲೇ ಈ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Last Updated 11, Apr 2018, 12:44 PM IST