ಮಕ್ಕಳ ಭಾಗ್ಯ ಕರುಣಿಸೋ ಶಕ್ತಿ ಈ ದೇವಿಗಿದೆ ಎಂದು ಭಕ್ತರು ನಂಬಿದ್ದಾರೆ. ಹಾಗೇ ವರ್ಷಕ್ಕೊಮ್ಮೆ ಮಾತ್ರ ಈ ದೇವಿ ದರ್ಶನ ಭಾಗ್ಯ ನೀಡುತ್ತಾಳೆ.
ಹಾಸನದ ಅಧಿದೇವತೆ ಹಾಸನಾಂಬೆ. ಈಕೆ ಐತಿಹಾಸಿಕ ಹಿನ್ನೆಲೆ ಹೊಂದಿದ ಶಕ್ತಿದೇವತೆ . ಕಳೆದ ವರ್ಷ ಹಚ್ಚಿದ ದೀಪ ಈ ವರ್ಷ ಬಾಗಿಲು ತೆರೆದಾಗಲೂ ಉರಿಯುತ್ತಿರುತ್ತದೆ ಹಾಗೂ ದೇವರ ಮುಂದಿಟ್ಟಿದ್ದ ಎಡೆ ಹಳಸಿರುವುದಿಲ್ಲ, ದೇವಿಗೆ ಮುಡಿಸಿರುವ ಹೂವು ಬಾಡದೇ ಹಾಗೇ ಇರುತ್ತದೆ. ಅಂತಹ ಮಹಿಮೆಯನ್ನು ದೇವಿ ಹೊಂದಿದ್ದಾಳೆ ಅನ್ನೋ ನಂಬಿಕೆಯಿದೆ. ಮಕ್ಕಳ ಭಾಗ್ಯ ಕರುಣಿಸೋ ಶಕ್ತಿ ಈ ದೇವಿಗಿದೆ ಎಂದು ಭಕ್ತರು ನಂಬಿದ್ದಾರೆ. ಹಾಗೇ ವರ್ಷಕ್ಕೊಮ್ಮೆ ಮಾತ್ರ ಈ ದೇವಿ ದರ್ಶನ ಭಾಗ್ಯ ನೀಡುತ್ತಾಳೆ. ಅಶ್ವಿಜ ಮಾಸದ ಮೊದಲನೆ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹಾಗೇ ಈ ವರ್ಷ ಅಶ್ವಿಜ ಮಾಸದ ಮೊದಲನೇ ಗುರುವಾರ ಅಂದರೆ ನಾಳೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ನವೆಂಬರ್ 1 ರಂದು ಬಾಗಿಲು ಮುಚ್ಚಲಾಗುವುದು. ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಸಿಗಲಿದೆ.
