ಕೊನೆಗೂ ರೋಹಿಣಿ ಸಿಂಧೂರಿಗೆ ವರ್ಗಾವಣೆ ’ಭಾಗ್ಯ’ ಕೊಟ್ಟ ಸರ್ಕಾರ!

First Published 7, Mar 2018, 9:45 PM IST
Hasana DC Rohini Sindhuri Transfer
Highlights

ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿಗಳು ಮೇಜರ್ ಸರ್ಜರಿ ಮಾಡಿದೆ. ರೋಹಿಣಿ ಸಿಂಧೂರಿ ಸೇರಿ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. 

ಬೆಂಗಳೂರು (ಮಾ. 07): ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿಗಳು ಮೇಜರ್ ಸರ್ಜರಿ ಮಾಡಿದೆ. ರೋಹಿಣಿ ಸಿಂಧೂರಿ ಸೇರಿ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. 
ರಾಜ್ಯಾದ್ಯಂತ ಮತದಾರರ ಪಟ್ಟಿ ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ  ಚುನಾವಣಾ ಕರ್ತವ್ಯದಲ್ಲಿದ್ದ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ.  ಕೊನೆಗೂ ರೋಹಿಣಿ ಸಿಂಧೂರಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ. 
ರೋಹಿಣಿ ಸಿಂಧೂರಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಆಯುಕ್ತ ಹುದ್ದೆ ನೀಡಲಾಗಿದೆ.  ತಿಂಗಳಿನ ಹಿಂದೆಯೇ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸರ್ಕಾರ ಆದೇಶಿಸಿತ್ತು.  ಚುನಾವಣೆ ಆಯೋಗ ಆಕ್ಷೇಪ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಿಯೇ ಮುಂದುವರೆದಿದ್ದರು. 

12 ಐಎಎಸ್ ಅಧಿಕಾರಿಗಳ ವರ್ಗಾವಣೆ 
ರಂದೀಪ್.ಡಿ - ಹಾಸನ ಜಿಲ್ಲಾಧಿಕಾರಿ 
ಕಾವೇರಿ ಬಿ.ಬಿ. - ಚಾಮರಾಜನನಗರ ಜಿಲ್ಲಾಧಿಕಾರಿ
ಶೆಟ್ಟಣ್ಣವರ್ ಎಸ್.ಬಿ. - ವಿಜಯಪುರ ಜಿಲ್ಲಾಧಿಕಾರಿ
ಶಿವಕುಮಾರ್ ಕೆ.ಬಿ. - ಮೈಸೂರು ಜಿಲ್ಲಾಧಿಕಾರಿ
ರಾಮು ಬಿ - ಆಯುಕ್ತರು, ಪಶು ಸಂಗೋಪನಾ ಇಲಾಖೆ
ಕ್ಯಾಪ್ಟನ್ ಡಾ.ಕೆ.ರಾಜೇಂದ್ರ - ರಾಮನಗರ ಜಿಲ್ಲಾಧಿಕಾರಿ
ಡಾ.ಮಮತಾ ಬಿ.ಆರ್. - ಎಂಬಿ, ಕೆಎಸ್ ಡಿಎಲ್, ಬೆಂಗಳೂರು
ಡಾ.ಎನ್.ಶಿವಶಂಕರ್ - ಆಯುಕ್ತರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ
ಡಾ.ಅರುಂಧತಿ ಚಂದ್ರಶೇಖರ್ - ಆಯುಕ್ತರು, ಆಹಾರ ಮತ್ತು ನಾಗರಿಕ ಇಲಾಖೆ
ಆರ್.ಲತಾ - ಸಿಇಒ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್
ದಯಾನಂದ್ ಕೆ - ಬೆಂಗಳೂರು ನಗರ ಜಿಲ್ಲಾಧಿಕಾರಿ

loader