ಪರಸ್ಪರ ಪ್ರೀತಿಯಲ್ಲಿ ಬಿದ್ದ ಅಣ್ಣ-ತಂಗಿ| ಕುಟುಂಬಸ್ಥರ ಭಯದಿಂದ ತೆಗೆದುಕೊಂಡ ನಿರ್ಧಾರ ಮಾತ್ರ ಬೆಚ್ಚಿ ಬೀಳಿಸುವಂತಿದೆ.

ಚಂಡೀಗಡ್[ಏ.08]: ಹರ್ಯಾಣದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಅಣ್ಣ ತಮ್ಮಂದಿರ ಮಕ್ಕಳು[ಅಣ್ಣ-ತಂಗಿ]ಸಿವಾನಾ ಹಳ್ಳಿಯಲ್ಲಿದ್ದ ದೇವಸ್ಥಾನದ ಕೋಣೆಯೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾದ ಯುವತಿ 12ನೇ ತರಗತಿ ತೇರ್ಗಡೆ ಹೊಂದಿದ್ದರೆ, ಬಿಎ ವ್ಯಾಸಂಗ ಪೂರ್ಣಗೊಳಿಸಿದ್ದ ಯುವಕ ಹರ್ಯಾಣದ ದಿವ್ಯಾಂಗ ಕ್ರಿಕೆಟ್ ತಂಡದ ಸದಸ್ಯನಾಗಿದ್ದ. ಇವರಿಬ್ಬರೂ ಏಪ್ರಿಲ್ 1ರಿಂದ ಮನೆಯಿಂದ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಏಪ್ರಿಲ್ 2 ರಂದು ಇಬ್ಬರ ಮೃತದೇಹ ಸಿಕ್ಕಿತ್ತು.

ಸಿವಾನಾ ಹಳ್ಳಿಯ ಹೊರ ವಲಯದಲ್ಲಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ ಪೂಜೆ ಮಾಡಲು ಬಂದ ಯುವಕ ಬಾಗಿಲು ತೆರೆದಾಗ ಯುವಕ ಯುವತಿ ಇಬ್ಬರೂ ನೇಣಿಗೆ ಶರಣಾಗ ವಿಚಾರ ಬೆಳಕಿಗೆ ಬಂದಿದೆ. ಆ ಕೂಡಲೇ ಆತ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ.

ಮೃತ ಯುವತಿಯನ್ನು ಸಿವಾನಾ ನಿವಾಸಿ 18 ವರ್ಷದ ಅನಿತಾ ಹಾಗೂ ನೆರೆ ಮನೆಯಾತ 25 ವರ್ಷದ ಕುಲವಂತ್ ಎಂದು ಗುರುತಿಸಲಾಗಿದೆ. ಇಬ್ಬರೂ ಸಹೋದರರ ಮಕ್ಕಳಾಗಿದ್ದ[ಅಣ್ಣ-ತಂಗಿ] ಇವರು ಪರಸ್ಪರ ಪ್ರೀತಿಸುತ್ತಿದ್ದರು. ಏಪ್ರಿಲ್ 1 ರಿಂದ ನಾಪತ್ತೆಯಾಗಿರುವ ಇವರನ್ನು ಹುಡುಕಿ ಕೊಡುವಂತೆ ಕುಟುಂಬ ಸದಸ್ಯರು ಪೊಲೀಸರಿಗೆ ದೂರನ್ನೂ ನೀಡಿದ್ದರು.