ದೀಪಶ್ರೀ ವೃದ್ಧಾಶ್ರಮದಲ್ಲಿ ಬಂಧು ಬಳಗವಿಲ್ಲದೇ ದಿನ ನೂಕುತ್ತಿದ್ದವರಿಗೆ ಇವತ್ತು ಹರಿಪ್ರಿಯಾ ಭೇಟಿ ಖುಷಿ ನೀಡಿತು. ಇವರೆಲ್ಲರ ಆರೋಗ್ಯ ವಿಚಾರಿಸಿದರು.

ನೀರ್ ದೋಸೆ ಹಾಟ್ ಬೆಡಗಿ ಹರಿಪ್ರಿಯಾ, ತಮ್ಮ 25 ಜನ್ಮ ದಿವನ್ನ ಅರ್ಥ ಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಪಾರ್ಟೀ ಗೀಟಿ ಅನ್ನದೇನೆ, ತಮ್ಮ ಮನೆ ಸಮೀಪದ ವೃದ್ಧಾಶ್ರಮದಲ್ಲಿ ಸಮಯ ಕಳೆದಿದ್ದಾರೆ. ಅಲ್ಲಿದ್ದ ಹಿರಿಯ ಜೀವನಗೊಂದಿಗೆ ಆಪ್ತವಾಗಿ ಮಾತನಾಡಿದ್ದಾರೆ. ರಾಜರಾಜೇಶ್ವರಿ ನಗರದ ದೀಪಶ್ರೀ ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳೊಂದಿಗೆ ಹರಿಪ್ರಿಯಾ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ್ರು.

ದೀಪಶ್ರೀ ವೃದ್ಧಾಶ್ರಮದಲ್ಲಿ ಬಂಧು ಬಳಗವಿಲ್ಲದೇ ದಿನ ನೂಕುತ್ತಿದ್ದವರಿಗೆ ಇವತ್ತು ಹರಿಪ್ರಿಯಾ ಭೇಟಿ ಖುಷಿ ನೀಡಿತು. ಇವರೆಲ್ಲರ ಆರೋಗ್ಯ ವಿಚಾರಿಸಿದರು. ಇದಾದ ಬಳಿಕ ಹಿರಿಯ ಜೀವಿಗಳ ಮಧ್ಯೆ ಕೇಕ್ ಕಟ್ ಮಾಡಿ ಬರ್ತಡೇ ಆಚರಿಸಿಕೊಂಡ್ರು.. ಬಳಿಕ ಎಲ್ಲರಿಗೂ ಉಪಹಾರ, ಸಿಹಿ ನೀಡಿದ್ರು. ಒಟ್ಟಿನಲ್ಲಿ ನೀರ್ ದೋಸೆ ನಟಿಗೆ ವಿಭಿನ್ನವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಖುಷಿಯಾದ್ರೆ, ಅಲ್ಲಿದ್ದ ಹಿರಿಯ ಜೀವಗಳಿಗೆ ನಟಿಯ ಭೇಟಿ ಹೊಸ ಚೈತನ್ಯ ನೀಡಿತು..