15 ದಿನಗಳ ಕಾಲ ನಿರಂತರ ಉಪವಾಸ ಸತ್ಯಾಗ್ರಹದ ಮೂಲಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಾರ್ದಿಕ್ ಪಾಟೀಲ್ ಅವರನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ.
ಬೆಂಗಳೂರು : ಕಳೆದ 15 ದಿನಗಳಿಂದ ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದ ಹಾರ್ದಿಕ್ ಪಟೇಲ್ ಅವರನ್ನು ಇದೀಗ ಡಿಶ್ಚಾರ್ಜ್ ಮಾಡಲಾಗಿದೆ.
ಅಹಮದಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದ್ದು, ಡಿಶ್ಚಾರ್ಜ್ ಮಾಡಿ ನಿವಾಸಕ್ಕೆ ಕರೆತರಲಾಗಿದೆ.
ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾರ್ದಿಕ್ ಪಟೇಲ್ ಆಗಸ್ಟ್ 25ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಇದರಿಂದ ಅವರ ವಿವಿಧ ಅಂಗಾಂಗಗಳು ವೈಫಲ್ಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡುತ್ತಿದ್ದ ವೇಳೆಯೂ ಕೂಡ ಅವರು ಆಸ್ಪತ್ರೆಯ ಬೆಡ್ ಮೇಲೆ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದರು.
ಅಲ್ಲದೇ ಇದೀಗ ಅವರ ಸ್ಥಿತಿ ಕೊಂಚ ಸುಧಾರಿಸಿದ್ದು ಮನೆಗೆ ಕರೆತರಲಾಗಿದೆ. ಆದರೆ ಉಪವಾಸವನ್ನು ನಿವಾಸದಲ್ಲಿಯೇ ಮುಂದುವರಿಸುತ್ತಾರೆ ಎಂದು ಪಾಸ್ ಮುಖಂಡರು ಫೇಸ್ ಬುಕ್ ಲೈವ್ ಮೂಲಕ ಹೇಳಿದ್ದಾರೆ.
