ಹೆಗ್ಗನಹಳ್ಳಿಯಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಸಚಿನ್ ಹಾಗೂ ಪ್ರವೀಣ್ ಎಂಬ ಇಬ್ಬರು ಯುವಕರು ಚಿತ್ರನಟಿಯೊಬ್ಬರ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ.  ಯುವಕರಿಬ್ಬರೂ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ನಟಿ ತಿಳಿಸಿದ್ದಾರೆ. ಘಟನೆ ನಿನ್ನೆ ತಡರಾತ್ರಿ ನಡೆದಿರುವುದರಿಂದ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ.

ಬೆಂಗಳೂರು(ಮೇ.01): ಬೆಂಗಳೂರಿನಲ್ಲಿ ಯುವ ನಟಿಗೆ ಯುವಕರು ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ಹೆಗ್ಗನಹಳ್ಳಿಯಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಸಚಿನ್ ಹಾಗೂ ಪ್ರವೀಣ್ ಎಂಬ ಇಬ್ಬರು ಯುವಕರು ಚಿತ್ರನಟಿಯೊಬ್ಬರ ಕೈ ಹಿಡಿದು ಎಳೆದಾಡಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಯುವಕರಿಬ್ಬರೂ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ನಟಿ ತಿಳಿಸಿದ್ದಾರೆ. ಘಟನೆ ನಿನ್ನೆ ತಡರಾತ್ರಿ ನಡೆದಿರುವುದರಿಂದ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ.

ಇನ್ನು ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ ನಟಿ 'ಈ ಇಬ್ಬರೂ ಯುವಕರು ನನಗೆ ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು. ಸರಿಯಾಗುತ್ತಾರೆ ಎಂದು ಈವರೆಗೂ ನಾನು ಸುಮ್ಮನಿದ್ದೆ. ಅಲ್ಲದೇ ಕರೆ ಮಾಡಿ ಕೆಟ್ಟದಾಗಿ ಬೈಯ್ಯುತ್ತಿದ್ದ ಇದನ್ನೆಲ್ಲಾ ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೆಟ್ಟ ಸಂದೇಶಗಳನ್ನೂ ಕಳುಹಿಸುತ್ತಿದ್ದ. ಈ ಪ್ರಕರಣ ದೊಡ್ಡದಾಗಬಾರದೆಂದು ಈವರೆಗೂ ಸುಮ್ಮನಿದ್ದೆ' ಎಂದಿದ್ದಾರೆ

ರಾಜಗೋಪಾಲ್ ನಗರದ ಪೊಲೀಸ್ ಠಾಣೆಯಲ್ಲಿ, ಸೆಕ್ಷನ್ 354 ಕಾಯ್ದೆಯಡಿಯಲ್ಲಿ ಯುವಕರಿಬ್ಬರ ವಿರುದ್ಧ ದೂರು ದಾಖಲಾಗಿದೆ.