ನವದೆಹಲಿ(ಸೆ.17): ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಸ್ವತಂತ್ರ ಭಾರತದ ಬಳಿಕ ಜನಿಸಿದ ಮೊದಲ ಪ್ರಧಾನಿಯೆಂಬ ಹೆಗ್ಗಳಿಗೆ ಪಾತ್ರರಾಗಿರೊ ನರೇಂದ್ರ ಮೋದಿ ಇಂದು 68ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ತನ್ನ ಪರಮೋಚ್ಛ ನಾಯಕನ ಜನ್ಮದಿನವನ್ನು ಬಿಜೆಪಿ ಸೇವಾ ದಿನವನ್ನಾಗಿ ಆಚರಿಸುತ್ತಿದೆ. ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸೇವಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದು ಸ್ವಚ್ಛತಾ ಅಭಿಯಾನ ಕೈಗೊಳ್ಳಲಿದ್ದಾರೆ.  

ಇದೇ ವೇಳೆ ದೇಶದ ಪ್ರಧಾನಿಗೆ ಈಗಾಗಲೇ ದೇಶದಲ್ಲೇಡೆಯಿಂದ ಜನ್ಮದಿನದ ಶುಭಷಯಗಳು ಹರಿದು ಬರುತ್ತಿವೆ. ರಾಷ್ಟ್ರಪತಿ ರಾಮಮಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಪಿಎಂ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಮೋದಿ ಅವರಿಗೆ ಶುಭಾಷಯ ತಿಳಿಸಿದ್ದಾರೆ.