ಬೆಂಗಳೂರು(ಸೆ.26): ಪ್ರಕರಣವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಪತ್ನಿ ವಿದ್ಯಾ ಹಂಡಿಬಾಗ್ ಅವರಿಗೆ ಉಪ ನೋಂದಣಾಕಾರಿ ಹುದ್ದೆಯನ್ನು ರಾಜ್ಯ ಸರ್ಕಾರ ನೀಡಿದೆ. ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಪ್ರಕರಣದಡಿ ಉಪನೋಂದಣಾಕಾರಿಯಾಗಿ ನೇಮಕ ಮಾಡಿದ ಸರ್ಕಾರದ ಆದೇಶದ ಪ್ರತಿಯನ್ನು ವಿದ್ಯಾ ಹಂಡಿಬಾಗ್ ಅವರಿಗೆ ವಿತರಿಸಿದರು. ವಿದ್ಯಾ ಹಂಡಿಬಾಗ್ ಬೈಲಹೊಂಗಲದಲ್ಲಿ ಒಂದು ವರ್ಷ ತರಬೇತಿ ಅವಗೆ ಉಪನೋಂದಣಾಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಲಂಚ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿತ್ತು. ಈ ಮಧ್ಯೆ, ಹಂಡಿಬಾಗ್ ಕುಟುಂಬದವರು ಮನೆ ಆಧಾರವಾಗಿದ್ದ ಕಲ್ಲಪ್ಪನ ಸಾವಿನ ಹಿನ್ನೆಲೆಯಲ್ಲಿ ಅನುಕಂಪ ಆಧಾರಿತ ಹುದ್ದೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಕಲ್ಲಪ್ಪ ಕುಟುಂಬದ ಬಗ್ಗೆ ಸಿಐಡಿ ಅಕಾರಿಗಳು ಕೂಡ ಸರ್ಕಾರಕ್ಕೆ ವೌಖಿಕ ವರದಿ ಸಲ್ಲಿಸಿದ್ದರು. ಹೀಗಾಗಿ ಸರ್ಕಾರ ಕಲ್ಲಪ್ಪ ಪತ್ನಿಗೆ ಸರ್ಕಾರಿ ನೌಕರಿ ನೀಡಿ ನೆರವಾಗಿದೆ.