ಮ್ಯೂನಿಚ್‌ನಲ್ಲಿ ಆಯೋಜಿತವಾಗಿದ್ದ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಆಸೈ, ಪಾಕಿಸ್ತಾನದ ವಿಶಾಲ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಹಫೀಜ್ ಪಾಕ್‌ಗೂ ಅಪಾಯಕಾರಿ ವ್ಯಕ್ತಿ. ಇದೇ ಕಾರಣಕ್ಕಾಗಿ ಆತನನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್(ಫೆ.21): ಮುಂಬೈ ಸರಣಿ ಸ್ಫೋಟ ಪ್ರಕರಣದ ರೂವಾರಿ, ಜಮಾತ್ ಉದ್ ದಾವಾ ಸಂಘಟನೆಯ ನೇತಾರ ಹಫೀಜ್ ಸಯೀದ್, ಪಾಕಿಸ್ತಾನಕ್ಕೂ ಭಾರೀ ಅಪಾಯಕಾರಿಯಾದ ವ್ಯಕ್ತಿ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೈ ಹೇಳಿದ್ದಾರೆ. ಈ ಮೂಲಕ ಹಫೀಜ್ ಉಗ್ರ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಮ್ಯೂನಿಚ್ನಲ್ಲಿ ಆಯೋಜಿತವಾಗಿದ್ದ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಆಸೈ, ಪಾಕಿಸ್ತಾನದ ವಿಶಾಲ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಹಫೀಜ್ ಪಾಕ್ಗೂ ಅಪಾಯಕಾರಿ ವ್ಯಕ್ತಿ. ಇದೇ ಕಾರಣಕ್ಕಾಗಿ ಆತನನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಉಗ್ರವಾದವನ್ನು ಯಾವುದೇ ಧರ್ಮದ ಜೊತೆ ಜೋಡಿಸುವುದು ಸರಿಯಲ್ಲ. ಉಗ್ರರು, ಕ್ರೈಸ್ತರಾಗಲೀ, ಮುಸ್ಲಿಮರಾಗಲೀ, ಹಿಂದುಗಳಾಗಲೀ ಆಗಿರುವುದಿಲ್ಲ. ಅವರೆಲ್ಲಾ ಉಗ್ರರಷ್ಟೇ ಎಂದು ಹೇಳಿದ್ದಾರೆ.
ಆದರೆ ಆಸೈ ಅವರ ಈ ಹೇಳಿಕೆಗೆ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ರಕ್ಷಣಾ ಸಚಿವರನ್ನು ಭಾರತದ ಮುಖವಾಣಿ ಎಂದೆಲ್ಲಾ ಟೀಕಿಸಲಾಗಿದೆ. ದೇಶಪ್ರೇಮಿ ಹಫೀಜ್ ಸಯೀದ್ನನ್ನು ಪಾಕಿಸ್ತಾನಕ್ಕೇ ಅಪಾಯಕಾರಿ ಎಂದು ಹೇಳುವ ಮೂಲಕ ಆಸೈ ತಾವು ಭಾರತದ ಮುಖವಾಣಿ ಎಂಬುದನ್ನು ಬಹಿರಂಗವಾಗಿ ತೋರಿಸಿದ್ದಾರೆ ಎಂದು ಹಲವು ರಾಜಕೀಯ ಪಕ್ಷಗಳ ನಾಯಕರು, ಧಾರ್ಮಿಕ ಮುಖಂಡರು ಕಿಡಿಕಾರಿದ್ದಾರೆ.
ಸಯೀದ್ಗನ್ಪರವಾನಗಿರದ್ದು: ಉಗ್ರ ಹಫೀಜ್ ಸಯೀದ್ ಆತನ ಸಂಘಟನೆಯ ಸದಸ್ಯರಿಗೆ ನೀಡಲಾಗಿದ್ದ 44 ಶಸ್ತ್ರಾಸ್ತ್ರಗಳ ಪರವಾನಗಿಯನ್ನು, ಪಂಜಾಬ್ ರಾಜ್ಯ ಸರ್ಕಾರ ರದ್ದುಪಡಿಸಿದೆ. ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
