ದಾವಣಗೆರೆ 108 ವಾಹನ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವ ಹಾಗು ಉಮೇಶ ಎಂಬುವರಿಗೆ ಜಿವಿಕೆ ಸಂಸ್ಥೆ ಅಮಾನತ್ತಿನ ಶಿಕ್ಷೆ ನೀಡಿದೆ. ಇಲ್ಲಸಲ್ಲದ ಕಾರಣಗಳನ್ನು ನೀಡಿ ಅಮಾನತ್ತು ಮಾಡಿ ತನಿಖೆ ನಡೆಸುವಂತೆ ಜಿವಿಕೆ ಸಂಸ್ಥೆ ಮೇಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಬೆಂಗಳೂರು (ಡಿ.29): 108 ಆಂಬ್ಯುಲೆನ್ಸ್'ಗಳಲ್ಲಿ ಏನೆಲ್ಲಾ ಕರ್ಮಕಾಂಡ ನಡೆಯುತ್ತಿದೆ, ಅದು ಸರ್ಕಾರಕ್ಕೆ ಹೇಗೆಲ್ಲಾ ಮೋಸ ಮಾಡುತ್ತಿದೆ, ಹಾಗೂ ವಾಹನದಲ್ಲಿರುವ ಸವಲತ್ತುಗಳ ಗುಣಮಟ್ಟದ ಬಗ್ಗೆ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿ ಜಿವಿಕೆ ಸಂಸ್ಥೆ ಬಂಡವಾಳ ಬಯಲು ಮಾಡಿತ್ತು.
ಹಗರಣದ ಕೂಪವಾಗಿರುವ 108 ಸೇವೆ : ಬಟಾಬಯಲು ಮಾಡಿದ ಸುವರ್ಣ ನ್ಯೂಸ್
ಇದಕ್ಕೆ ಪ್ರತಿಯಾಗಿ ಜಿವಿಕೆ ಸಂಸ್ಥೆ ತಮ್ಮ ಉದ್ಯೋಗಿಗಳ ಮೇಲೆ ಗದಪ್ರಹಾರ ಮಾಡುತ್ತಿದೆ. ತಮ್ಮ ಹುಳುಕುಗಳನ್ನು ಸರಿಪಡಿಸಬೇಕಾಗಿದ್ದ ಸಂಸ್ಥೆ ಸುವರ್ಣನ್ಯೂಸ್'ಗೆ ಮಾಹಿತಿ ನೀಡಿರುವ ಸಿಬ್ಬಂದಿಗಳು ಯಾರೆಂಬುವುದನ್ನು ಪತ್ತೆ ಹಚ್ಚಿ ಅವರ ಮೇಲೆ ಶಿಸ್ತುಕ್ರಮಗಳನ್ನು ಕೈಗೊಳ್ಳುತ್ತಿದೆ.
ದಾವಣಗೆರೆ 108 ವಾಹನ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವ ಹಾಗು ಉಮೇಶ ಎಂಬುವರಿಗೆ ಜಿವಿಕೆ ಸಂಸ್ಥೆ ಅಮಾನತ್ತಿನ ಶಿಕ್ಷೆ ನೀಡಿದೆ. ಇಲ್ಲಸಲ್ಲದ ಕಾರಣಗಳನ್ನು ನೀಡಿ ಅಮಾನತ್ತು ಮಾಡಿ ತನಿಖೆ ನಡೆಸುವಂತೆ ಜಿವಿಕೆ ಸಂಸ್ಥೆ ಮೇಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಸುವರ್ಣನ್ಯೂಸ್ 'ಅಂಬ್ಯುಲೆನ್ಸ್ 108' ಇಂಪಾಕ್ಟ್!
ಅಷ್ಟೇ ಸಾಲದು ಎಂಬಂತೆ, ಜಿವಿಕೆ ಸಂಸ್ಥೆ ಸಿಬ್ಬಂದಿಗೆ ನೀಡಿರುವ ರೆಸ್ಟ್ ರೂಂ ನಲ್ಲಿ ಪರಮಶಿವ ಅವರ ಸ್ನೇಹಿತರು ಕುಡಿತ ಪಾರ್ಟಿ ಮಾಡಿದ್ದಾರೆಂದು ಆರೋಪಿಸಿ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಒಂದಿಲ್ಲೊಂದು ರೀತಿಯಲ್ಲಿ ಉದ್ಯೋಗಿಗಳ ಮೇಲೆ ಕಿರುಕುಳ ನೀಡುವುದರ ಜೊತೆ ಕಂಪನಿ ವಿರುದ್ಧ ಮಾತನಾಡಿದ ಮಾಹಿತಿ ಸೋರಿಕೆ ಮಾಡಿದ ಯಾರನ್ನು ಉಳಿಸುವುದಿಲ್ಲವೆಂದು ಅಮಾನತ್ತಿನ ಮೂಲಕ ಎಚ್ಚರಿಕೆಯನ್ನು ನೀಡಿದೆ.