ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಶಾಸಕ ಬಿ. ಸುರೇಶಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗಂಗಾಧರ ಸ್ವಾಮಿಗಳು ಉಪಸ್ಥಿತರಿರುವ ಸಮಾರಂಭವನ್ನು ಜಿ.ಎಸ್‌.ಶಿವಕುಮಾರ್‌ ಉದ್ಘಾಟಿಸಲಿದ್ದಾರೆ.

ತುಮಕೂರು: ತುಮಕೂರು ತಾಲೂಕು ಮಾಕನಹಳ್ಳಿಯ ಅಪ್ಪಾಜಪ್ಪನ ಪಾಳ್ಯದಲ್ಲಿ ಇದೇ ತಿಂಗಳ 3ರ ಬುಧವಾರ ರಾತ್ರಿ 7.30ಕ್ಕೆ ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವದ ಪ್ರಯುಕ್ತ ಗುರುವಂದನೆ ಹಾಗೂ ಬಸವೇಶ್ವರ ನಾಟಕ ಏರ್ಪಡಿಸಲಾಗಿದೆ. ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಶಾಸಕ ಬಿ. ಸುರೇಶಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗಂಗಾಧರ ಸ್ವಾಮಿಗಳು ಉಪಸ್ಥಿತರಿರುವ ಸಮಾರಂಭವನ್ನು ಜಿ.ಎಸ್‌.ಶಿವಕುಮಾರ್‌ ಉದ್ಘಾಟಿಸಲಿದ್ದಾರೆ. ಡಾ. ಕವಿತಾ ಕೃಷ್ಣ ಅವರು ಉಪನ್ಯಾಸ ನೀಡಲಿರುವ ಸಮಾರಂಭ ದಲ್ಲಿ, ಸಿ.ವಿ ಮಹದೇವಯ್ಯ, ಟಿ.ಬಿ ಶೇಖರ್‌, ಪಾಂಡು ರಂಗಶೆಟ್ಟಿ, ಚಂದ್ರಮೌಳಿ, ಡಿ.ಶಿವಮಹ ದೇವಯ್ಯ, ವೈ.ಎನ್‌ ಶಿವಣ್ಣ ಮುಂತಾದವರು ಭಾಗ ವಹಿಸಲಿದ್ದಾರೆ. ವಿ.ಶಿವಲಿಂಗಯ್ಯನವರಿಂದ ‘‘ಭೂ ಕೈಲಾಸ'' ಎಂಬ ಶಿವಕಥೆ, ಸಿದ್ಧಗಂಗಾ ಮಠದ ಕಲಾವಿದರಿಂದ ಜಗಜ್ಯೋ ತಿ ಬಸವೇಶ್ವರ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಎಂ.ವಿ ನಾಗಣ್ಣನವರು ತಿಳಿಸಿದ್ದಾರೆ.