ಎಸ್ಸೆಂ ಕೃಷ್ಣ ತಮ್ಮನ ಮಗ ಮತ್ತೆ ಕಾಂಗ್ರೆಸ್‌ ಕಟ್ಟಾಳು!

First Published 4, Apr 2018, 7:28 AM IST
Gurucharan Work To Congress
Highlights

ಮಾಜಿ ಮುಖ್ಯ​ಮಂತ್ರಿ ಎಸ್‌.ಎಂ. ಕೃಷ್ಣ ಅವರ ತಮ್ಮನ ಮಗ ಗುರು​ಚ​ರಣ್‌ ಈ ಬಾರಿ ಮದ್ದೂರು ಕ್ಷೇತ್ರ​ದಲ್ಲಿ ಕಣಕ್ಕೆ ಇಳಿ​ಯುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ​ ಕೆಲಸ ಮಾಡಲಿದ್ದಾರೆ. ಹೀಗೆ, ಕಾಂಗ್ರೆಸ್‌ ಪಕ್ಷದಲ್ಲೇ ಉಳಿ​ದು​ಕೊ​ಳ್ಳುವ ಹಾಗೂ ಪಕ್ಷದ ಪರ ಕೆಲಸ ಮಾಡುವ ಮಾಹಿ​ತಿ​ಯನ್ನು ತಮ್ಮ ದೊಡ್ಡಪ್ಪ ಎಸ್‌.ಎಂ. ಕೃಷ್ಣ ಅವರಿಗೂ ನೀಡಿದ್ದಾರೆ.

ಎಸ್ಸೆಂ ಕೃಷ್ಣ ತಮ್ಮನ ಮಗ ಮತ್ತೆ ಕಾಂಗ್ರೆಸ್‌ ಕಟ್ಟಾಳು!

ಎಸ್‌.​ಗಿ​ರೀ​ಶ್‌​ಬಾ​ಬು

ಬೆಂಗ​ಳೂರು : ಮಾಜಿ ಮುಖ್ಯ​ಮಂತ್ರಿ ಎಸ್‌.ಎಂ. ಕೃಷ್ಣ ಅವರ ತಮ್ಮನ ಮಗ ಗುರು​ಚ​ರಣ್‌ ಈ ಬಾರಿ ಮದ್ದೂರು ಕ್ಷೇತ್ರ​ದಲ್ಲಿ ಕಣಕ್ಕೆ ಇಳಿ​ಯುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ​ ಕೆಲಸ ಮಾಡಲಿದ್ದಾರೆ. ಹೀಗೆ, ಕಾಂಗ್ರೆಸ್‌ ಪಕ್ಷದಲ್ಲೇ ಉಳಿ​ದು​ಕೊ​ಳ್ಳುವ ಹಾಗೂ ಪಕ್ಷದ ಪರ ಕೆಲಸ ಮಾಡುವ ಮಾಹಿ​ತಿ​ಯನ್ನು ತಮ್ಮ ದೊಡ್ಡಪ್ಪ ಎಸ್‌.ಎಂ. ಕೃಷ್ಣ ಅವರಿಗೂ ನೀಡಿದ್ದಾರೆ.

ಮೈಸೂ​ರಿ​ನಲ್ಲಿ ಸೋಮ​ವಾರ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರನ್ನು ಭೇಟಿ ಮಾಡಿದ್ದ ಗುರು​ಚ​ರಣ್‌ ತಮ್ಮ ಅಭಿ​ಪ್ರಾಯ ತಿಳಿ​ಸಿ​ದ್ದಾರೆ. ತನ್ಮೂ​ಲಕ ಈ ಬಾರಿ ಕಾಂಗ್ರೆಸ್‌ ಪಕ್ಷದ ಪರ​ವಾಗಿ ಕ್ಷೇತ್ರ​ದಲ್ಲಿ ಕೆಲಸ ಮಾಡಲು ಮುಂದಾ​ಗಿ​ದ್ದಾರೆ ಹಾಗೂ ಈ ಸೇವೆ​ಗಾಗಿ ಗುರು​ಚ​ರ​ಣ್‌ಗೆ ಭವಿ​ಷ್ಯ​ ಕಟ್ಟಿ​ಕೊ​ಡುವ ಹೊಣೆ​ಯನ್ನು ಸಿದ್ದ​ರಾ​ಮಯ್ಯ ವಹಿ​ಸಿ​ಕೊಂಡಿ​ದ್ದಾರೆ. ಹೀಗಂತ ಹೇಳುತ್ತವೆ ಕಾಂಗ್ರೆಸ್‌ ಮೂಲ​ಗ​ಳು.

ಇಷ್ಟಕ್ಕೂ ಕಾಂಗ್ರೆಸ್‌ ಪರ ಕೆಲಸ ಮಾಡಲು ಕೃಷ್ಣ ಅವರ ಅನು​ಮ​ತಿ​ಯನ್ನು ಗುರು​ಚ​ರಣ್‌ ಪಡೆ​ಯ​ಲು ಏನು ಕಾರಣ ಎಂದು ಕೆಣ​ಕಿ​ದರೆ ಕುತೂ​ಹ​ಲ​ಕಾರಿ ಸಂಗತಿ ಹೊರಬೀಳು​ತ್ತದೆ. ಕೃಷ್ಣ ಅವರು ಪಕ್ಷ ತ್ಯಜಿ​ಸಿ ಬಿಜೆಪಿಗೆ ತೆರಳಿದ ಮೇಲೆ ಗುರು​ಚ​ರಣ್‌ ಅವರೊಂದಿಗೆ ಬಿಜೆ​ಪಿಗೆ ತೆರ​ಳ​ಲಿಲ್ಲ. ಕಾಂಗ್ರೆ​ಸ್‌ಗೆ ರಾಜೀ​ನಾಮೆ ನೀಡಿ ಪಕ್ಷ​ದಿಂದ ಹೊರ​ಬಂದು ತಟ​ಸ್ಥ​ರಾ​ಗಿ​ದ್ದ​ರು.

ಚುನಾ​ವಣೆ ಸಮೀ​ಪಿ​ಸು​ತ್ತಿ​ದ್ದಂತೆಯೇ ಮದ್ದೂರು ಕಾಂಗ್ರೆ​ಸ್ಸಿ​ಗರ ಮೂಲಕ ಗುರು​ಚ​ರಣ್‌ ಅವ​ರನ್ನು ಕರೆಸಿ ಮಾತ​ನಾ​ಡಿ​ಸಿದ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಮುಂದಿನ ನಡೆಯೇನು ಎಂದು ವಿಚಾ​ರಿ​ಸಿ​ದ್ದಾರೆ. ಈ ಸಂದ​ರ್ಭ​ದಲ್ಲಿ ಪಕ್ಷ​ದಲ್ಲೇ ಉಳಿ​ದು ಕೆಲಸ ಮಾಡುವ ಉತ್ಸಾ​ಹ​ವನ್ನು ಗುರು​ಚ​ರಣ್‌ ತೋರಿ​ದ್ದಾರೆ. ಇದೇ ವೇಳೆ ಮದ್ದೂ​ರಿ​ನಿಂದ ಕೃಷ್ಣ ಅವರ ಪುತ್ರಿ ಶಾಂಭವಿ ಬಿಜೆ​ಪಿ​ಯಿಂದ ಕಣಕ್ಕೆ ಇಳಿ​ಯ​ಲಿ​ದ್ದಾರೆ ಎಂಬ ವದಂತಿ ತೀವ್ರ​ಗೊಂಡಿ​ತ್ತು.

ಆಗ ಮತ್ತೆ ಗುರು​ಚ​ರಣ್‌ ಕರೆ​ಸಿದ ಸಿಎಂ, ಮದ್ದೂ​ರಿ​ನಲ್ಲಿ ಕೆಲಸ ಮಾಡುವ ಬಗ್ಗೆ ನಿಮ್ಮ ದೊಡ್ಡಪ್ಪನ ಸಹ​ಮ​ತ ಪಡೆ​ದು​ಕೊಂಡು ಬಿಡಿ. ಕುಟುಂಬ​ದಲ್ಲಿ ಸಮ​ಸ್ಯೆ​ಯಾ​ಗು​ವುದು ಬೇಡ ಎಂದು ಸೂಚಿ​ಸಿ​ದ್ದರು ಎನ್ನ​ಲಾ​ಗಿ​ದೆ. ಇದಕ್ಕೆ ಗುರು​ಚ​ರಣ್‌ ಕೂಡ ನಮ್ಮ ಕುಟುಂಬ​ದಿಂದಲೇ ಯಾರಾ​ದರೂ ಚುನಾ​ವ​ಣೆಗೆ ನಿಲ್ಲು​ವು​ದಾ​ದರೆ ನಾವು ಅವರ ಪರ​ವಾ​ಗಿಯೇ ಕೆಲಸ ಮಾಡ​ಬೇ​ಕಾ​ಗು​ತ್ತದೆ ಎಂದು ಸ್ಪಷ್ಟ​ಪ​ಡಿ​ಸಿ​ದರು ಎನ್ನ​ಲಾ​ಗಿ​ದೆ.

ಅನಂತರ ಶಾಂಭವಿ ಈ ಬಾರಿ ಚುನಾ​ವ​ಣೆಗೆ ನಿಲ್ಲು​ವು​ದಿಲ್ಲ ಎಂಬುದು ಇದೀಗ ಸ್ಪಷ್ಟ​ಗೊಂಡಿದೆ. ಈ ಹಿನ್ನೆ​ಲೆ​ಯಲ್ಲಿ ಸೋಮ​ವಾರ ಸಂಜೆ ಮೈಸೂ​ರಿ​ನಲ್ಲಿ ಸಿದ್ದ​ರಾ​ಮಯ್ಯ ಅವ​ರನ್ನು ಭೇಟಿ ಮಾಡಿದ ಗುರು​ಚ​ರಣ್‌, ಮದ್ದೂ​ರಿ​ನಲ್ಲಿ ಕಾಂಗ್ರೆಸ್‌ ಪಕ್ಷದ ಪರ​ವಾಗಿ ಕೆಲಸ ಮಾಡಲು ಕೃಷ್ಣ ಅವರ ಅಭ್ಯಂತ​ರ​ವೇನೂ ಇಲ್ಲ. ನಿನ್ನ ಭವಿಷ್ಯ ನೀನು ನೋಡಿಕೋ ಎಂದು ಅವರು ತಿಳಿ​ಸಿ​ದ್ದಾರೆ. ಹೀಗಾಗಿ ಪಕ್ಷದ ಪರ​ವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿ​ಸಿ​ದ್ದಾರೆ. ಇದಕ್ಕೆ ಪ್ರತಿ​ಯಾಗಿ ಗುರು​ಚ​ರಣ್‌ರ ರಾಜ​ಕೀಯ ಭವಿಷ್ಯ ರೂಪಿ​ಸುವ ಹೊಣೆ ಸಿದ್ದ​ರಾ​ಮಯ್ಯ ಹೆಗ​ಲೇ​ರಿದೆ ಎಂದು ಸಿಎಂ ಆಪ್ತ ಮೂಲ​ಗಳು ತಿಳಿ​ಸಿ​ವೆ.

ವಾಸ್ತ​ವ​ವಾಗಿ ಗುರು​ಚ​ರಣ್‌ ಈ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ​ಯಾ​ಗಿ​ದ್ದರು. ಆದರೆ, ಅದು ಸಾಧ್ಯ​ವಿಲ್ಲ ಎಂಬ ಸ್ಪಷ್ಟಸಂದೇಶ ದೊರ​ಕಿ​ದ ನಂತರ ಅವರು ಪಕ್ಷದ ಪರ​ವಾಗಿ ಕೆಲಸ ಮಾಡಲು ಮುಂದಾ​ಗಿ​ದ್ದಾರೆ. ಮದ್ದೂ​ರಿ​ನಲ್ಲಿ ಮಧು ಮಾದೇ​ಗೌಡ ಹಾಗೂ ಕಲ್ಪನಾ ಸಿದ್ದ​ರಾಜು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ​ಯಾ​ಗಿ​ದ್ದಾರೆ. ಈ ಇಬ್ಬರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಗುರು​ಚ​ರಣ್‌ ಈ ಇಬ್ಬರ ಪೈಕಿ ಯಾರಿಗೆ ಟಿಕೆಟ್‌ ದೊರ​ಕಿ​ದರೂ ಅವರ ಪರ​ವಾಗಿ ಕೆಲಸ ಮಾಡಲು ಸಜ್ಜಾ​ಗಿ​ದ್ದಾರೆ ಎನ್ನ​ಲಾ​ಗಿ​ದೆ. ಇದೇ ವೇಳೆ ಕೃಷ್ಣ ಅವರ ಸಹೋ​ದರ ಎಸ್‌.ಎಂ.ಶಂಕರ್‌ ಸಹ ಕಾಂಗ್ರೆಸ್‌ ಪರ​ವಾಗಿ ಈ ಚುನಾ​ವ​ಣೆ​ಯಲ್ಲಿ ಕೆಲಸ ಮಾಡುವ ಸಾಧ್ಯ​ತೆ​ಗ​ಳಿವೆ ಎಂದು ಮೂಲ​ಗಳು ಹೇಳಿವೆ.

ದೊಡ್ಡ​ವರು (ಎ​ಸ್‌.ಎಂ.ಕೃಷ್ಣ) ಕಾಂಗ್ರೆಸ್‌ ಪಕ್ಷ ತೊರೆದ ನಂತರ ನಾನೂ ಪಕ್ಷ ತೊರೆ​ದಿದ್ದೆ. ಆದರೆ, ಬಿಜೆಪಿ ಸೇರಿ​ರ​ಲಿಲ್ಲ. ಆಗ ಸಿದ್ದ​ರಾ​ಮಯ್ಯ ಅವರು ನನ್ನನ್ನು ಕರೆ​ಸಿ ಕಾಂಗ್ರೆಸ್‌ ಪರ ನಿಲ್ಲು​ವಂತೆ ಸೂಚಿ​ಸಿ​ದ್ದರು. ನಮ್ಮ ಕುಟುಂಬ​ದ​ವ​ರಲ್ಲಿ ಯಾರೇ ಒಬ್ಬರು ಚುನಾ​ವಣೆಯಲ್ಲಿ ಸ್ಪರ್ಧಿ​ಸಿ​ದರೆ ಇಂತಹ ನಿರ್ಧಾರ ಕೈಗೊ​ಳ್ಳಲು ಆಗು​ತ್ತಿ​ರ​ಲಿಲ್ಲ. ಈಗ ನಮ್ಮ ಕುಟುಂಬ​ದಿಂದ ಯಾರೂ ಚುನಾ​ವ​ಣೆಗೆ ನಿಲ್ಲು​ತ್ತಿಲ್ಲ. ಇಂತಹ ಪರಿ​ಸ್ಥಿ​ತಿ​ಯಲ್ಲಿ ನಾನು ತಟ​ಸ್ಥ​ವಾಗಿ ಉಳಿ​ದರೆ ಕ್ಷೇತ್ರ​ದ​ಲ್ಲಿ​ರುವ ನಮ್ಮ ರಾಜ​ಕೀಯ ಶಕ್ತಿ ಕುಂದು​ತ್ತದೆ. ಹೀಗಾಗಿ ಕಾಂಗ್ರೆಸ್‌ ಪರ ನಿಲ್ಲುವ ಮಾಹಿ​ತಿ​ಯನ್ನು ದೊಡ್ಡ​ವ​ರಿಗೂ ನೀಡಿ​ದ್ದೇನೆ. ಸೋಮ​ವಾರ ಮತ್ತೆ ಸಿಎಂ ಕರೆಸಿ ಪಕ್ಷದ ಪರ ಕೆಲಸ ಮಾಡು​ವಂತೆ ಹೇಳಿ​ದರು. ನನ್ನ ಬೆಂಬ​ಲಿ​ಗರ ಅಭಿ​ಪ್ರಾಯ ಪಡೆದು ಒಂದು ವಾರ​ದಲ್ಲಿ ತೀರ್ಮಾನ ತಿಳಿ​ಸು​ವು​ದಾಗಿ ಸಿಎಂ ಅವ​ರಿಗೆ ತಿಳಿ​ಸಿ​ದ್ದೇ​ನೆ.

- ಗುರು​ಚ​ರಣ್‌, ಮದ್ದೂರು ಕ್ಷೇತ್ರದ ಮುಖಂಡ ಹಾಗೂ ಎಸ್‌.ಎಂ.ಕೃಷ್ಣ ಸಂಬಂಧಿ

loader