ಬಾಬಾನಿಗೆ ಚಿಕಿತ್ಸೆ ನೀಡಿರುವ ಮನೋಶಾಸ್ತ್ರಜ್ಞರ ಪ್ರಕಾರ 'ಈತನ ಮನೋವ್ಯಾದಿಯನ್ನು ಗುಣಪಡಿಸಲು ಹಲವು ದಿನಗಳೆ ಬೇಕಾಗಬಹುದು ಇಲ್ಲವೇ ಅಥವಾ ಇದರಿಂದ ವ್ಯತಿರಿಕ್ತ ಪರಿಣಾಮ ಸಂಭವಿಸುವ ಸಾಧ್ಯತೆಯಿದೆ' ಎನ್ನುತ್ತಾರೆ.

ಸಿರ್ಸಾ(ಸೆ.11): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಸೆಕ್ಸ್ ದಾಹ ಮಾತ್ರ ತಪ್ಪುತ್ತಿಲ್ಲ. ವೈದ್ಯರು ಈತನಿಗೆ ಲೈಂಗಿಕ ಆಸಕ್ತಿ ಅತೀ ಹೆಚ್ಚಿದೆ ಎಂದು ದೃಢಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡೇರಾದಲ್ಲಿದ್ದಾಗ ಹಲವು ಮಹಿಳೆಯರ ಜೊತೆ ಈತನಿಗೆ ಲೈಂಗಿಕ ಸಂಪರ್ಕವಿತ್ತು. ಜೈಲಿಗೆ ಬಂದ ನಂತರ ದೈಹಿಕವಾಗಿ ಚಡಪಡಿಸುತ್ತಿರುತ್ತಾನೆ. ಸುಸ್ತಾದವನಂತೆ ಇರುತ್ತಾನೆ. ಬಹುಶಃ ನಿತ್ಯವು ಹಸ್ತಮೈಥುನ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಬಾಬಾನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಬಾಬಾನಿಗೆ ಚಿಕಿತ್ಸೆ ನೀಡಿರುವ ಮನೋಶಾಸ್ತ್ರಜ್ಞರ ಪ್ರಕಾರ 'ಈತನ ಮನೋವ್ಯಾದಿಯನ್ನು ಗುಣಪಡಿಸಲು ಹಲವು ದಿನಗಳೆ ಬೇಕಾಗಬಹುದು ಇಲ್ಲವೇ ಅಥವಾ ಇದರಿಂದ ವ್ಯತಿರಿಕ್ತ ಪರಿಣಾಮ ಸಂಭವಿಸುವ ಸಾಧ್ಯತೆಯಿದೆ' ಎನ್ನುತ್ತಾರೆ. ಬಹುಶಃ ಅನಿಯಮಿತ ಲೈಂಗಿಕ ಆಸಕ್ತಿಯ ಜೊತೆ ಡ್ರಗ್ಸ್ ವ್ಯಸನಿಯಾಗಿದ್ದು, ನಿಯಮಿತವಾಗಿ ಶಕ್ತಿವರ್ಧಕ ಪಾನೀಯ ಹಾಗೂ ಸೆಕ್ಸ್ ಟಾನಿಕ್'ಗಳನ್ನು ಆಸ್ಟ್ರೇಲಿಯಾ ಹಾಗೂ ಇನ್ನಿತರ ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ' ಎನ್ನುತ್ತಿವೆ ಮೂಲಗಳು.

ಕುತೂಹಲ ವಿಷಯವೆಂದರೆ 1988ರ ನಂತರ ಈತ ಮದ್ಯ ಸೇವನೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದ. ಸಿಬಿಐ ನ್ಯಾಯಾಧೀಶರು ಒಮ್ಮೆ ವಿಚಾರಣೆಗೊಳಪಡಿಸಿದಾಗ ತಾನು ಗಂಡಸಲ್ಲ ಎಂದಿದ್ದ. ಅನಂತರ ಸಾಕ್ಷಿದಾರರು ಹಾಗೂ ಲೈಂಗಿಕ ಪರೀಕ್ಷೆ ನಂತರ ರೇಪ್ ಬಾಬಾನ ಪುರುಷತ್ವವನ್ನು ದೃಢಪಡಿಸಿದ್ದರು.