ಡೇರಾ ಸಚ್ಚಾ ಸೌಧಾ ಸಂಘಟನೆಯ ಸ್ವಯಂ ಘೋಷಿತ ದೇವಮಾನವ ಬಾಬಾ ಗುರ್ಮೀತ್ ರಾಮ್ ರಹೀಂ ಅತ್ಯಾಚಾರಿ ಎಂಬ ಆರೋಪ ಸಾಬೀತಾಗಿದ್ದು, ಇವರನ್ನು ಅತ್ಯಾಚಾರಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೇ ಇವರ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಘೋಷಿಸುವುದಾಗಿ ತಿಳಿಸಿದೆ. ಸದ್ಯ ಬಾಬಾ ರಾಮ್ ರಹೀಂರನ್ನು ಹರ್ಯಾಣದ ರೋಟಕ್ ಜೈಲಿನಲ್ಲಿರಿಸಲಾಗಿದೆ. ಆದರೆ ನ್ಯಾಯಾಲಯದಿಂದಲೇ ಅತ್ಯಾಚಾರಿ ಎಂದು ಎಂದು ಘೋಷಿಸಲಾಗಿರುವ ಈ ಕೈದಿಗೆ ಜೈಲಿನಲ್ಲಿ ನೀಡಲಾಗುತ್ತಿರುವ ಸೌಲಭ್ಯ ಹೇಗಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಸದ್ಯ ವರದಿಯೊಂದು ಈ ಪ್ರಶ್ನೆಗೆ ಉತ್ತರ ನೀಡಿದೆ.
ಹರ್ಯಾಣ(ಆ.26): ಡೇರಾ ಸಚ್ಚಾ ಸೌಧಾ ಸಂಘಟನೆಯ ಸ್ವಯಂ ಘೋಷಿತ ದೇವಮಾನವ ಬಾಬಾ ಗುರ್ಮೀತ್ ರಾಮ್ ರಹೀಂ ಅತ್ಯಾಚಾರಿ ಎಂಬ ಆರೋಪ ಸಾಬೀತಾಗಿದ್ದು, ಇವರನ್ನು ಅತ್ಯಾಚಾರಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೇ ಇವರ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಘೋಷಿಸುವುದಾಗಿ ತಿಳಿಸಿದೆ. ಸದ್ಯ ಬಾಬಾ ರಾಮ್ ರಹೀಂರನ್ನು ಹರ್ಯಾಣದ ರೋಟಕ್ ಜೈಲಿನಲ್ಲಿರಿಸಲಾಗಿದೆ. ಆದರೆ ನ್ಯಾಯಾಲಯದಿಂದಲೇ ಅತ್ಯಾಚಾರಿ ಎಂದು ಎಂದು ಘೋಷಿಸಲಾಗಿರುವ ಈ ಕೈದಿಗೆ ಜೈಲಿನಲ್ಲಿ ನೀಡಲಾಗುತ್ತಿರುವ ಸೌಲಭ್ಯ ಹೇಗಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಸದ್ಯ ವರದಿಯೊಂದು ಈ ಪ್ರಶ್ನೆಗೆ ಉತ್ತರ ನೀಡಿದೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ನ್ಯಾಯಾಲಯದಲ್ಲಿ ಅತ್ಯಾಚಾರಿ ಎಂದು ಘೋಷಿಸಲಾಗಿರುವ ರಾಮ್ ರಹೀಂರನ್ನು ಹೆಲಿಕಾಪ್ಟರ್ ಮೂಲಕ ಮೊದಲು ಪೊಲೀಸ್ ಗೆಸ್ಟ್ ಹೌಸ್'ಗೆ ಕರೆದೊಯ್ದಿದ್ದು, ಬಳಿಕ ರೋಟಕ್ ಜೈಲಿಗೆ ಕರೆದೊಯ್ದು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಕುಡಿಯಲು ಮಿನರಲ್ ನೀರನ್ನು ಸರಬರಾಜು ಮಾಡಿದ್ದಾರೆ. ಅಲ್ಲದೇ ಬಾಬಾ ರಾಮ್ ರಹೀಂ ಜೈಲಿನಲ್ಲಿ ತಮನ್ನೊಂದಿಗೆ ಅಸಿಸ್ಟಂಟ್ ಒಬ್ಬರನ್ನು ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಈ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು 'ಇಂತಹ ಐಷಾರಾಮಿ ಸೌಲಭ್ಯ ನೀಡಲು ಇದು ಗೆಸ್ಟ್ ಹೌಸ್ ಅಲ್ಲ ಬದಲಾಗಿ ಜೈಲು' ಎಂದಿದ್ದಾರೆ.
