ಇಡಿಐ ಬಿಲ್ಡಿಂಗ್ನಲ್ಲಿ ಅಡಗಿ ಕುಳಿತಿರುವ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಕಟ್ಟಡದಿಂದ ಉಗ್ರರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭದ್ರತಾ ಪಡೆ ಕಟ್ಟಡವನ್ನು ಸುತ್ತುವರಿದಿದೆ.
ಪಾಂಪೋರ್, ಜಮ್ಮು-ಕಾಶ್ಮೀರ (ಅ.1!): ಜಮ್ಮು-ಕಾಶ್ಮೀರದ ಪಾಂಪೋರ್ನಲ್ಲಿ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ತಡರಾತ್ರಿವರೆಗೆ ಮುಂದುವರೆದಿದೆ.
ಕಣಿವೆ ರಾಜ್ಯದ ರಾಜಧಾನಿ ಶ್ರೀನಗರದ ಪುಲ್ವಾಮಾ ಜಿಲ್ಲೆಯ ಪಾಂಪೋರ್'ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಿನ್ನೆ ಇಬ್ಬರು ಸೈನಿಕರು ಗಾಯಗೊಂಡಿದ್ದರು.
ಇಡಿಐ ಬಿಲ್ಡಿಂಗ್ನಲ್ಲಿ ಅಡಗಿ ಕುಳಿತಿರುವ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಕಟ್ಟಡದಿಂದ ಉಗ್ರರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭದ್ರತಾ ಪಡೆ ಕಟ್ಟಡವನ್ನು ಸುತ್ತುವರಿದಿದೆ.
ಕಟ್ಟಡದಲ್ಲಿ ಕಳೆದ ಫೆಬ್ರವರಿಯಲ್ಲಿ ಇದೇ ಕಟ್ಟಡದ ಮೇಲೆ ದಾಳಿ ನಡೆದಿತ್ತು. ದಾಳಿಯಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿತ್ತು. ಅಲ್ಲದೇ ಮೂವರು ಭಾರತೀಯ ಯೋಧರು, ಓರ್ವ ನಾಗರಿಕ ಮೃತಪಟ್ಟಿದ್ದರು.
(ಸಾಂದರ್ಭಿಕ ಚಿತ್ರ)