Asianet Suvarna News Asianet Suvarna News

ಪೋಲಿ ಪ್ರೊಫೆಸರ್..! ಪಿಎಚ್'ಡಿಗೆಂದು ಬಂದವಳ ಜೊತೆ ಕೆಮಿಸ್ಟ್ರಿಗೆ ಕರೆದರೇ ಇಂಗ್ಲೀಷ್ ಪ್ರೊಫೆಸರ್?

ಪ್ರೊ| ರಮೇಶ್ ರಾಥೋಡ್ ಅವರಿಂದ ಈ ಯುವತಿ ಲೈಂಗಿಕ ಕಿರುಕುಳಕ್ಕೀಡಾಗಿದ್ದು ಇದೇ ಮೊದಲಲ್ಲ. ಯುವತಿಯು ಇದೇ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ 2 ವರ್ಷದಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆಗಿನಿಂದಲೂ ಈ ಪ್ರೊಫೆಸರ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ಬಂದಿದ್ದಾರೆ ಎಂದು ಈಕೆ ಹೇಳುತ್ತಾರೆ.

gulbarga university sexual harassment case

ಕಲಬುರ್ಗಿ(ಜೂನ್ 15): ಜನರಿಗೆ ಒಳ್ಳೆಯ ಮಾರ್ಗ ತೋರಿಸಬೇಕಾದ ಜ್ಞಾನ ದೇಗುಲಗಳಲ್ಲಿ ಅನಾಚಾರಗಳು ನಡೆದರೆ ಹೇಗೆ? ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ಕಿರುಕುಳ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂದರ್ಶನಕ್ಕೆ ಬಂದ ಯುವತಿಯೊಬ್ಬಳೊಂದಿಗೆ ವಿವಿಯ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇಂಗ್ಲೀಷ್ ವಿಭಾಗದ ಪ್ರೊಫೆಸರ್ ರಮೇಶ್ ರಾಥೋಡ್ ವಿರುದ್ಧ ಯುವತಿಯೊಬ್ಬರು ವಿವಿಯ ಕುಲಪತಿಯವರ ಬಳಿ ದೂರು ನೀಡಿದ್ದಾರೆ.

ಏನಾಯಿತು?
ಜೂನ್ 9ರಂದು ಇಂಗ್ಲೀಷ್ ಸ್ಟಡೀಸ್ ಸಬ್ಜೆಕ್ಟ್'ನಲ್ಲಿ ಪಿಎಚ್'ಡಿ ಸೀಟು ಬಯಸಿ ಸಂದರ್ಶನಕ್ಕೆ ಬಂದಿದ್ದ ವೇಳೆ ಯುವತಿಗೆ ಈ ಕೆಟ್ಟ ಅನುಭವವಾಯಿತಂತೆ. ಡೀನ್ ಸಮ್ಮುಖದಲ್ಲೇ ಸಂದರ್ಶನ ನಡೆಯಿತು. ಸಂದರ್ಶನದ ಮುಗಿಸಿ ಯುವತಿ ಹೊರಗೆ ಹೋಗುವಾಗ ಪ್ರೊ| ರಮೇಶ್ ರಾಥೋಡ್ ಅನುಚಿತವಾಗಿ ವರ್ತಿಸಿದ್ದಾರೆ. ಯುವತಿಯ ಮೈಕೈ ಮುಟ್ಟಿ ಡಬಲ್ ಮೀನಿಂಗ್ ಮಾತುಗಳನ್ನ ಆಡಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

"ನೀವು ಬುಕ್ ಆಗೋದು ಕಲಿಯಬೇಕು. ಅವರ ಜೊತೆ ಕೆಮಿಸ್ಟ್ರಿ ಸರಿ ಹೋಗದಿದ್ರೆ ನನ್ನ ಜೊತೆ ಬನ್ನಿ... ನಾನು ಕರೆದಾಗೆಲ್ಲಾ ಬರಬೇಕು.." ಎಂದು ಪ್ರೊಫೆಸರ್ ಹೇಳಿದರೆಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ಮನೆಗೆ ಹೋದ ಬಳಿಕವೂ ಫೋನ್ ಮಾಡಿ ಅಸಭ್ಯವಾಗಿ ಮಾತನಾಡುವುದನ್ನ ಮುಂದುವರಿಸಿದರು ಎಂದು ಆಕೆ ತಿಳಿಸಿದ್ದಾರೆ.

ಇದೇ ಮೊದಲಲ್ಲ:
ಪ್ರೊ| ರಮೇಶ್ ರಾಥೋಡ್ ಅವರಿಂದ ಈ ಯುವತಿ ಲೈಂಗಿಕ ಕಿರುಕುಳಕ್ಕೀಡಾಗಿದ್ದು ಇದೇ ಮೊದಲಲ್ಲ. ಯುವತಿಯು ಇದೇ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ 2 ವರ್ಷದಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆಗಿನಿಂದಲೂ ಈ ಪ್ರೊಫೆಸರ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ಬಂದಿದ್ದಾರೆ ಎಂದು ಈಕೆ ಹೇಳುತ್ತಾರೆ.

"ನಿಮ್ಮ ರಿಲೇಶನ್'ನವರೊಂದಿಗೆ ತುಂಬಾ ಕ್ಲೋಸ್ ಆಗಿರ್ತೀರಾ... ನನ್ನ ಜೊತೆಯೂ ಹಾಗೇ ಇರಿ..." - ಇವು ಪ್ರೊಫೆಸರ್ ಆಡುವ ಮಾತುಗಳ ಒಂದು ಸ್ಯಾಂಪಲ್. ಸುವರ್ಣನ್ಯೂಸ್ ಜೊತೆ ಮಾತನಾಡಿದ ಆ ಯುವತಿಯು ಈ ಪ್ರೊಫೆಸರ್'ನ ಎಲ್ಲಾ ಕಾಮಪುರಾಣವನ್ನು ಬಿಚ್ಚಿಟ್ಟರು.

ಇದೇ ಜೂನ್ 9ರಂದು ಯುವತಿಯು ಇಂಗ್ಲೀಷ್ ಪ್ರೊಫೆಸರ್ ವಿರುದ್ಧ ಕುಲಪತಿ ಡಾ. ನಿರಂಜನ್ ಬಳಿ ದೂರು ಕೊಟ್ಟಿದ್ದಾರೆ. ಇಷ್ಟಾದರೂ ರಮೇಶ್ ರಾಥೋಡ್ ತೀಟೆ ನಿಲ್ಲಲಿಲ್ಲ ಎಂದು ಆ ಯುವತಿ ಹೇಳುತ್ತಾರೆ. ವಿಪರ್ಯಾಸವೆಂದರೆ, ಯೂನಿವರ್ಸಿಟಿಯಲ್ಲಿರುವ ಪೊಲೀಸ್ ಠಾಣೆಗೆ ದೂರು ಕೊಟ್ಟರೆ, ಅದನ್ನು ಸ್ವೀಕರಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರಂತೆ.

Follow Us:
Download App:
  • android
  • ios