ಗುಜರಾತ್, [ನ.05]: ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಅಂತ ಶಿಕ್ಷಕರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ.

 ಆದರೆ  ಗುಜರಾತ್ ನ ದಾಹೋದ್ ಪ್ರಾಥಮಿಕ ಶಾಲೆ ಶಿಕ್ಷಕರಿಬ್ಬರು ಶಿಕ್ಷಕ ಎಂಬ ಪದಕ್ಕೆ ಮಸಿ ಬಳಿಯುವ ನೀಚ ಕೆಲಸ ಮಾಡಿದ್ದಾರೆ. ಶಾಲೆಯ ಕೊಠಡಿಯಲ್ಲಿಯೇ ಶಿಕ್ಷಕ ಹಾಗೂ ಶಿಕ್ಷಕಿಯೊಬ್ಬರು ಅಶ್ಲೀಲವಾಗಿ ವರ್ತಿಸಿದ್ದಾರೆ.

ಯಾರು ಇಲ್ಲದ ಸಂದರ್ಭದಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯೊಬ್ಬರು ಪರಸ್ಪರ ಕಿಸ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಆದರೆ, ಅದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

 ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಶಿಕ್ಷಕರಿಬ್ಬರು ಪರಸ್ಪರ ತಬ್ಬಿಕೊಂಡು ಮುತ್ತಿಕ್ಕುವ ದೃಶ್ಯ ಸೆರೆಯಾಗಿದೆ.