ಅಹಮದಾಬಾದ್(ಡಿ. 10) ಹೊರ ದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿರುವ ನಿತ್ಯಾನಂದನಿಗೆ ಒಂದೊಂದೆ ಕಂಟಕಗಳು ಶುರುವಾಗುತ್ತಿದೆ. ನಿತ್ಯಾನಂದನ ಆಶ್ರಮದಲ್ಲಿದ್ದ ಯುವತಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ  ಗುಜರಾತ್ ಪೊಲೀಸರ ವಿರುದ್ದ ಅಲ್ಲಿನ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

"

ತನ್ನ ಮಕ್ಕಳನ್ನ ಕೋರ್ಟ್ ಗೆ ಹಾಜರು ಪಡಿಸುವಂತೆ ಜನಾರ್ದನ ಶರ್ಮಾ ಎಂಬುವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್  ಸರ್ಕಾರಿ ವಕೀಲರು ಮತ್ತು ಪೊಲೀಸರ ವಿರುದ್ಧ ಗರಂ ಆಗಿದೆ.

Fact Check: ನಿತ್ಯಾನಂದನ ಪಾದಕ್ಕೆ ಎರಗಿದ ಗೃಹ ಸಚಿವ ಅಮಿತ್ ಶಾ...

ಗುಜರಾತ್ ಹೈಕೋರ್ಟ್ ವಿಚಾರಣೆ ನಡೆದಿದ್ದು ಯುವತಿಯರನ್ನ ಹಾಜರುಪಡಿಸದ ಪೊಲೀಸರನ್ನು ನ್ಯಾಯಾಲಯ ತರಾಟಗೆ ತೆಗೆದುಕೊಂಡಿದೆ. ಯುವತಿಯರು ದೇಶಬಿಟ್ಟು ಹೋಗಿರುವುದಾಗಿ ಹೈಕೋರ್ಟ್ ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ನೇಪಾಳಕ್ಕೆ ರಸ್ತೆ ಮೂಲಕ ತೆರಳಿ ಟ್ರಿನಿಡಾಡ್ ಗೆ ಹಾರಿದ್ದಾರೆ ಎನ್ನುವುದು ಪೊಲೀಸರ ರಿಪೋರ್ಟ್.

ಯುವತಿಯರು ಹಾಗೂ ನಿತ್ಯಾನಂದ ಪ್ರತಿದಿನದ ಮಾಹಿತಿ ನೀಡಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು  ವಿಚಾರಣೆಯನ್ನು ಡಿ.20 ಕ್ಕೆ ನ್ಯಾಯಾಲಯ ಮುಂದೂಡಿದೆ.