ಗುಜರಾತ್ ಎರಡನೇ ಹಂತದ ಚುನಾವಣೆಗೆ ಬಿಜೆಪಿ 13 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದು, ಹಾಲಿ ಶಾಸಕ ಅರವಿಂದ್ ಸಿಂಗ್ ಚೌಹಾಣ್ ಗೆ ಟಿಕೆಟ್ ನಿರಾಕರಿಸಿ, ಪ್ರಭಾತ್‌ಸಿಂಗ್ ಚೌಹಾಣ್ ಅವರ ಸೊಸೆಗೆ ಟಿಕೆಟ್ ನೀಡಲಾಗಿದೆ

ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಸಾಮಾನ್ಯ.ಆದರೆ, ಗುಜರಾತ್ ಚುನಾವಣೆಯಲ್ಲಿ ಕಾಲೋಲ್ ವಿಧಾನಸಭಾ ಕ್ಷೇತ್ರದಿಂದ ಅತ್ತೆಯ ಬದಲು ಸೊಸೆಗೆ ಟಿಕೆಟ್ ನೀಡಿರುವುದು ಮಾವನ ಕೋಪಕ್ಕೆ ಕಾರಣ ವಾಗಿದೆ.

ಚುನಾವಣೆಯಲ್ಲಿ ಪತ್ನಿಯ ಬದಲು ಸೊಸೆಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಸಂಸದ ಪ್ರಭಾತ್‌ಸಿಂಗ್ ಚೌಹಾಣ್, ಬಿಜೆಪಿ ಗೆಲ್ಲುವ ಬಗ್ಗೆ ಯಾವುದೇ ಭರವಸೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಗುಜರಾತ್ ಎರಡನೇ ಹಂತದ ಚುನಾವಣೆಗೆ ಬಿಜೆಪಿ 13 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದು, ಹಾಲಿ ಶಾಸಕ ಅರವಿಂದ್ ಸಿಂಗ್ ಚೌಹಾಣ್ ಗೆ ಟಿಕೆಟ್ ನಿರಾಕರಿಸಿ, ಪ್ರಭಾತ್‌ಸಿಂಗ್ ಚೌಹಾಣ್ ಅವರ ಸೊಸೆಗೆ ಟಿಕೆಟ್ ನೀಡಲಾಗಿದೆ. ಆದರೆ, ಇದು ಕುಟುಂಬದಲ್ಲೇ ಭಿನ್ನಾಭಿಪ್ರಾಯ ಸೃಷ್ಟಿಸಿದೆ