ಬೆಂಗಳೂರು : 2017 ರಲ್ಲಿ ಹೊಸ ವರ್ಷದ ಆಚರಣೆ ವೇಳೆ ತನ್ನ ಉದ್ಯೋಗಿಗಳಿಗೆ 1200 ಕಾರುಗಳನ್ನು ಉಡುಗೊರೆ ಕೊಟ್ಟು ಸುದ್ದಿಯಾಗಿದ್ದ ಸೂರತ್ ಮೂಲದ ಉದ್ಯಮಿ ಇದೀಗ ಮತ್ತೊಮ್ಮೆ ತಮ್ಮ ಉದ್ಯೊಗಿಗಳಿಗೆ ಕಾರು ನೀಡಿ ಸುದ್ದಿಯಾಗಿದ್ದಾರೆ. 

ಹರೇಕೃಷ್ಣ ಎಕ್ಸ್‌ಪೋರ್ಟರ್ಸ್‌ನ ಮಾಲೀಕ ಸಾವಜಿ ಧೋಲಾಕಿಯಾ ಅವರು ತಮ್ಮ ಕಂಪನಿಯಲ್ಲಿ 25 ವರ್ಷ ಪೂರೈಸಿದ ಮೂವರು ಉದ್ಯೋಗಿಗಳಿಗೆ 3 ಕೋಟಿ ರು. ಮೊತ್ತದ ಮೂರು ಮರ್ಸಿಡಿಸ್ ಬೆನ್ಜ್ ಎಸ್‌ಯುವಿ ಕಾರುಗಳನ್ನು ಉಡುಗೊರೆ ನೀಡಿದ್ದಾರೆ. ’

ಸೂರತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಲೇಶ್ ಜಾದಾ, ಮುಕೇಶ್ಚಂದ್ಪಾರಾ, ಮಹೇಶ್ ಚಂದ್ಪಾರಾ ಅವರಿಗೆ 1 ಕೋಟಿ ರು. ಮೌಲ್ಯದ ಕಾರನ್ನು ಹಸ್ತಾಂತರಿಸಲಾಯಿತು.