ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಹಾಗೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಾಹ್ಮಣರು ಎಂದು ಗುಜರಾತ್ ವಿಧಾನಸಭಾ ಸ್ಪೀಕರ್  ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ಹೆಚ್ಚು ಜ್ಞಾನವನ್ನು ಹೊಂದಿದ ವ್ಯಕ್ತಿಯನ್ನು ಬ್ರಾಹ್ಮಣ ಎಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ ಎಂದಿದ್ದಾರೆ.  

ಗಾಂಧಿನಗರ : ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಹಾಗೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಾಹ್ಮಣರು ಎಂದು ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ಹೆಚ್ಚು ಜ್ಞಾನವನ್ನು ಹೊಂದಿದ ವ್ಯಕ್ತಿಯನ್ನು ಬ್ರಾಹ್ಮಣ ಎಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ ಎಂದಿದ್ದಾರೆ.

ಗಾಂಧಿ ನಗರದಲ್ಲಿ ನಡೆದ ಬ್ರಾಹ್ಮಣ ಸಮಾವೇಶದಲ್ಲಿ ಮಾತನಾಡಿದ ಅವರು ತಮ್ಮ ಈ ಹೇಳಿಕೆಯನ್ನು ನೀವು ತಪ್ಪಾಗಿ ಅರ್ಥೈಸಿಕೊಳ್ಳದಿರಿ. ಅಂಬೇಡ್ಕರ್ ಬ್ರಾಹ್ಮಣ ಎಂದು ಹೇಳಲು ನನಗೆ ಯಾವುದೇ ರೀತಿ ಮುಜುಗರ ಇಲ್ಲ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಬ್ರಾಹ್ಮಣರೇ ಎಂದು ಈ ವೇಳೆ ಹೇಳಿದರು.

ಅಂಬೇಡ್ಕರ್ ದಲಿತ ಕುಟುಂಬದಲ್ಲಿ ಜನಿಸಿ, ಅಲ್ಲಿನ ಅಸಮಾನತೆಗೆ ಬೇಸತ್ತು ಬಳಿಕ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ್ದರು. ಭಾರತಕ್ಕೆ ಸಂವಿಧಾನವನ್ನು ನೀಡಿದ ಅವರನ್ನು ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ. ಮಹಾನ್ ಜ್ಞಾನಿಯಾಗಿದ್ದ ಅವರನ್ನು ಬ್ರಾಹ್ಮಣ ಎಂದರೆ ಯಾವ ತಪ್ಪಿಲ್ಲ ಎಂದು ಗುಜರಾತ್ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. 

Scroll to load tweet…