'ದೇಶದಾದ್ಯಂತ ಎಲ್ಲದಕ್ಕೂ ಒಂದೇ ರೀತಿಯ ತೆರಿಗೆ ಎಂದು ಬಿಂಬಿಸಲಾಗಿರುವ ಸರಕು ಮತ್ತು ಸೇವೆಗಳ ತೆರಿಗೆ ಜುಲೈ ಒಂದರಿಂದ ಜಾರಿಗೊಳಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯೋಜನೆಗೆ ಬದ್ಧವಾಗಿ ತೆರಿಗೆ ವಿಧಿಸಲಿವೆ'
ನವದೆಹಲಿ(ಫೆ.28): ಸರಕು ಮತ್ತು ಸೇವೆಗಳ ಏಕರೂಪ ತೆರಿಗೆ ಜುಲೈ ಒಂದರಿಂದ ದೇಶಾದ್ಯಂತ ಜಾರಿಗೊಳಸಲಾಗುತ್ತದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
'ದೇಶದಾದ್ಯಂತ ಎಲ್ಲದಕ್ಕೂ ಒಂದೇ ರೀತಿಯ ತೆರಿಗೆ ಎಂದು ಬಿಂಬಿಸಲಾಗಿರುವ ಸರಕು ಮತ್ತು ಸೇವೆಗಳ ತೆರಿಗೆ ಜುಲೈ ಒಂದರಿಂದ ಜಾರಿಗೊಳಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯೋಜನೆಗೆ ಬದ್ಧವಾಗಿ ತೆರಿಗೆ ವಿಧಿಸಲಿವೆ' ಎಂದು ತಿಳಿಸಿದರು.
ಕಳೆದ ವರ್ಷ ಆಗಸ್ಟ್'ನಲ್ಲಿ ರಾಜ್ಯಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆದರೆ ಕೆಲವೊಂದು ತೆರಿಗೆಗಳಲ್ಲಿ ಗೊಂದಲ ಹಾಗೂ ಅನುಮಾನಗಳಿದ್ದ ಕಾರಣ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ತಿಕ್ಕಾಟ ಶುರುವಾಗಿತ್ತು. ಸಂವಿಧಾನದಲ್ಲಿ ಕೆಲವೊಂದು ತಿದ್ದುಪಡಿ ತರುವ ಮೂಲಕ ಸಮಸ್ಯೆಗಳನ್ನು ನಿವಾರಿಸಲಾಗಿದೆ.
ಜಿಎಸ್'ಟಿ ತೆರಿಗೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದಾದ್ಯಂತ ಉತ್ಪಾದನೆ,ಮಾರಾಟ ಹಾಗೂ ಬಳಕೆಯ ಮೇಲೆ ವಿಧಿಸುವ ಸಮಗ್ರ ರೀತಿಯ ಪರೋಕ್ಷ ತೆರಿಗೆಯಾಗಿರುತ್ತದೆ. ಇದನ್ನುಈವರೆಗಿನಸರಕುಮತ್ತುಸೇವೆಗಳತೆರಿಗೆಬದಲಿಗೆಭಾರತದಾದ್ಯಂತ ‘ಇನ್ಪುಟ್ತೆರಿಗೆಕ್ರೆಡಿಟ್ಆಧಾರ’ದಮೇಲೆಕೇಂದ್ರಮತ್ತುರಾಜ್ಯಸರ್ಕಾರಗಳಿಂದಸರಕುಗಳುಅಥವಾಸೇವೆಗಳಮಾರಾಟಅಥವಾಖರೀದಿಗಾಗಿಪ್ರತಿಹಂತದಲ್ಲಿಹೇರಲಾಗುತ್ತದೆ.
