ಸರಕು ಮತ್ತು ಸೇವಾ ತೆರಿಗೆ
ನವದೆಹಲಿ(ಸೆ.26): ಆಗಸ್ಟ್ ತಿಂಗಳಲ್ಲಿ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ)ಯಿಂದ ಕೇಂದ್ರ ಸರ್ಕಾರ 90,669 ಕೋಟಿ ರು. ಸಂಗ್ರಹಿಸಿದೆ.
ಜುಲೈನಲ್ಲಿ 94,063 ಕೋಟಿ ರು. ಸಂಗ್ರಹವಾಗಿದೆ. ಸೆ.25ರ ವರೆಗೆ 90,669 ಕೋಟಿ ರು. ಜಿಎಸ್‌ಟಿ ಪಾವತಿಯಾಗಿದೆ. ಇದರಲ್ಲಿ 14402 ಕೋಟಿ ರು. ಕೇಂದ್ರ ಜಿಎಸ್‌ಟಿಯಿಂದ 21067 ಕೋಟಿ ರು. ರಾಜ್ಯ ಜಿಎಸ್‌ಟಿಯಿಂದ 47377 ಕೋಟಿ ರು. ಸಮಗ್ರ ಜಿಎಸ್‌ಟಿಯಿಂದ 7823 ಕೋಟಿ ರು. ಸಂಗ್ರಹವಾಗಿದೆ. ಆಗಸ್ಟ್ ತಿಂಗಳ ಜಿಎಸ್‌ಟಿ ಪಾವತಿಗೆ ಸೆ.20 ಕೊನೆಯ ದಿನವಾಗಿದೆ.
