ಗ್ರಾಹಕರ ಹಿತದೃಷ್ಟಿಯಿಂದ ಜಿಎಸ್'ಟಿ ಜಾರಿಯಾಗುವುದಕ್ಕೂ ಮೊದಲಿನ ವಸ್ತುಗಳ ಮೇಲೆ ಹೊಸ ಬೆಲೆ ಅಂಟಿಸಿ ಮಾಡದಿದ್ದಲ್ಲಿ ಜೈಲು ಸೇರುವುದರೊಂದಿಗೆ 1 ಲಕ್ಷ ರೂಪಾಯಿ ದಂಡ ಕಟ್ಟಲು ತಯಾರಾಗಿ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ತಯಾರಕರಿಗೆ ನೂತನ ಮಾರಾಟ ಬೆಲೆಯೊಂದಿಗೆ ಬಾಕಿ ಉಳಿದ ವಸ್ತುಗಳನ್ನು ಸಪ್ಟೆಂಬರ್ ಒಳಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ನವದೆಹಲಿ(ಜು.08): ಗ್ರಾಹಕರ ಹಿತದೃಷ್ಟಿಯಿಂದ ಜಿಎಸ್'ಟಿ ಜಾರಿಯಾಗುವುದಕ್ಕೂ ಮೊದಲಿನ ವಸ್ತುಗಳ ಮೇಲೆ ಹೊಸ ಬೆಲೆ ಅಂಟಿಸಿ ಮಾಡದಿದ್ದಲ್ಲಿ ಜೈಲು ಸೇರುವುದರೊಂದಿಗೆ 1 ಲಕ್ಷ ರೂಪಾಯಿ ದಂಡ ಕಟ್ಟಲು ತಯಾರಾಗಿ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ತಯಾರಕರಿಗೆ ನೂತನ ಮಾರಾಟ ಬೆಲೆಯೊಂದಿಗೆ ಬಾಕಿ ಉಳಿದ ವಸ್ತುಗಳನ್ನು ಸಪ್ಟೆಂಬರ್ ಒಳಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಜಿಎಸ್'ಟಿ ವಿಚಾರವಾಗಿ ಗ್ರಾಹಕರು ನೀಡುತ್ತಿರುವ ದೂರುಗಳಿಗೆ ಪರಿಹಾರ ನೀಡುವ ಸಲುವಾಗಿ ಈಗಾಗಲೇ ಗ್ರಾಹಕ ವ್ಯವಹಾರಗಳ ಇಲಾಖೆ ಸಮಿತಿಯೊಂದನ್ನು ರಚಿಸಿದೆ. ಇದರೊಂದಿಗೆ ತೆರಿಗೆ ವಿಚಾರದ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೆರೆಯಲಾಗಿದ್ದ 14 ಹೆಲ್ಪ್'ಲೈನ್'ಗಳ ಸಂಖ್ಯೆಯನ್ನು 60ಕ್ಕೇರಿಸಲಾಗಿದೆ.
ಇದೇ ವಿಚಾರವಾಗಿ ಮಾತನಾಡಿದ ಪಾಸ್ವಾನ್ 'ಜಿಎಸ್'ಟಿ ಜಾರಿಗೊಳಿಸುವಾಗ ಆರಂಭದಲ್ಲಿ ಅಡಚಣೆಗಳಿದ್ದವು. ಆದರೆ ಇವೆಲ್ಲಕ್ಕೂ ಶೀಘ್ರವಾಗಿ ಪರಿಹಾರ ಸಿಕ್ಕಿದೆ. ಆರ್ಥಿಕ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಯೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಜನರ ಗೊಂದಲ ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದಿದ್ದಾರೆ.
'ಜಿಎಸ್'ಟಿ ಜಾರಿಯಿಂದ ವಸ್ತುಗಳ ಬೆಲೆ ಇಳಿಕೆಯಾಗಿದೆ, ಇನ್ನು ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ನಾವು ಕಂಪೆನಿಗಳ ಉಳಿದಿರುವ ವಸ್ತುಗಳ ಮೇಲಿನ ಸಂಶೋಧಿತ ಬೆಲೆಯನ್ನು ಪ್ರಕಟಿಸಲು ತಿಳಿಸಿದ್ದೇವೆ. ವಸ್ತುಗಳ ಮೇಲೆ ನೂತನ ಮಾರಾಟ ಬೆಲೆಯನ್ನು ಅಂಟಿಸಬೇಕಿದೆ. ಇದರಿಂದ ಗ್ರಾಹಕರಿಗೂ ಜಿಎಸ್'ಟಿ ಬಳಿಕದ ಬೆಲೆ ತಿಳಿಯಬೇಕು' ಎಂದಿದ್ದಾರೆ.
ಬಳಿಕ ಮಾತನಾಡಿದ ಅವರು ಒಂದು ವೇಳೆ ಈ ಹಳೆ ವಸ್ತುಗಳ ಮೇಲೆ ಜಿಎಸ್'ಟಿ ಬಳಿಕದ ನೂತನ ಬೆಲೆಯನ್ನು ಅಂಟಿಸಿ ಮಾರಾಟ ಮಾಡದ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಂತಹವರಿಗೆ 1 ಲಕ್ಷದವರೆಗೂ ದಂಡ ವಿಧಿಸುವುದರೊಂದಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
