Asianet Suvarna News Asianet Suvarna News

ವೇಶ್ಯೆಯರಿಗೂ ತಟ್ಟಿದ ಜಿಎಸ್‌ಟಿ ಎಫೆಕ್ಟ್!

ವೇಶ್ಯೆಯರಿಗೂ ತಟ್ಟಿದ ಜಿಎಸ್‌ಟಿ ಎಫೆಕ್ಟ್!

GST hits nations largest red light area Sonagachi

ಮಹಿಳೆಯರು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ಕಿನ್‌ಗೆ ಶೇ.12ರಷ್ಟು ಜಿಎಸ್‌ಟಿ ವಿಧಿಸಿದ್ದು ವೇಶ್ಯೆಯರ ಸಿಟ್ಟಿಗೆ ಕಾರಣವಾಗಿದೆ. ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ವೇಶ್ಯಾವಾಟಿಕೆ ಅಡ್ಡೆ ಎನಿಸಿರುವ ಕೋಲ್ಕತಾದ ಸೊನಾಗಚಿಯ ಲೈಂಗಿಕ ಕಾರ್ಯಕರ್ತರು ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯನ್ನೇ ನಿರ್ಬಂಧಿಸುವ ಬೆದರಿಕೆ ಹಾಕಿದ್ದಾರೆ. ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ ಬಳಿಕ ಕಳೆದ 10 ವರ್ಷಗಳ ಹಿಂದೆ ಲೈಂಗಿಕ ಕಾರ್ಯಕರ್ತೆಯರು ನ್ಯಾಪ್ಕಿನ್ ಬಳಸಲು ಶುರು ಮಾಡಿದ್ದರು. ಆದರೆ, ಜಿಎಸ್‌ಟಿ ಬಳಿಕ ಸ್ಯಾನಿಟರಿ ನ್ಯಾಪ್ಕಿನ್‌ಗಳ ದರ ಭಾರೀ ಹೆಚ್ಚಳವಾಗಿರುವುದರಿಂದ ಪ್ಯಾಡ್‌ಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ ಎಂದು 13000 ನೊಂದಾಯಿತ ಸದಸ್ಯರನ್ನು ಹೊಂದಿರುವ ದರ್ಬಾರ್ ಮಹಿಳಾ ಸಮನ್ವಯ ಸಮಿತಿ ಆತಂಕ ವ್ಯಕ್ತಪಡಿಸಿದೆ.

Follow Us:
Download App:
  • android
  • ios