ಜು.1ರಂದು ಜಿಎಸ್‌ಟಿ ಜಾರಿಯಾಗಲಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಕಾರು, ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದು ಗ್ರಾಹಕ ನಿರೀಕ್ಷಿಸು ತ್ತಿದ್ದರೆ, ಜಾರಿಗೂ ಮುನ್ನವೇ ಭಾರೀ ಆಫರ್‌ ಮೂಲಕ ಜನರನ್ನು ಸೆಳೆಯಲು ಕಂಪನಿಗಳು ನಾನಾ ಆಫರ್‌ ಘೋಷಿಸಿವೆ. ಜೊತೆಗೆ ಆನ್‌ಲೈನ್‌ ಮಾರಾಟ ಕಂಪೆನಿಗಳೂ ಹಲವು ಕೊಡುಗೆಗೆ ಮುಂದಾಗಿವೆ.

ನವದೆಹಲಿ: ಜು.1ರಂದು ಜಿಎಸ್‌ಟಿ ಜಾರಿಯಾಗಲಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಕಾರು, ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದು ಗ್ರಾಹಕ ನಿರೀಕ್ಷಿಸು ತ್ತಿದ್ದರೆ, ಜಾರಿಗೂ ಮುನ್ನವೇ ಭಾರೀ ಆಫರ್‌ ಮೂಲಕ ಜನರನ್ನು ಸೆಳೆಯಲು ಕಂಪನಿಗಳು ನಾನಾ ಆಫರ್‌ ಘೋಷಿಸಿವೆ. ಜೊತೆಗೆ ಆನ್‌ಲೈನ್‌ ಮಾರಾಟ ಕಂಪೆನಿಗಳೂ ಹಲವು ಕೊಡುಗೆಗೆ ಮುಂದಾಗಿವೆ.

ದೇಶಾದ್ಯಂತ ವಿವಿಧ ಕಂಪನಿಗಳು ಗರಿಷ್ಠ . 2.5 ಲಕ್ಷದ ವರೆಗೂ ದರ ಕಡಿತ ಮಾಡಿ, ಗ್ರಾಹಕರನ್ನು ಸೆಳೆಯುವ ಯತ್ನ ನಡೆಸುತ್ತಿವೆ. ಆಡಿ, ಬಿಎಂಡಬ್ಲ್ಯೂ, ಮರ್ಸಿಡಿಸ್‌ ಬೆಂಜ್‌ನಂತಹ ಪ್ರತಿಷ್ಠಿತ ಕಾರು ಕಂಪನಿಗಳು ಗರಿಷ್ಠ .10.9 ಲಕ್ಷದ ವರೆಗೂ ದರ ಕಡಿತ ಆಫರ್‌ ನೀಡಿವೆ.

ಇನ್ನೊಂದೆಡೆಯಲ್ಲಿ ಜಿಎಸ್‌ಟಿ ಜಾರಿಯಾಗುವುದಕ್ಕೂ ಮುನ್ನಾ ತಮ್ಮಲ್ಲಿನ ಸರಕುಗಳ ದಾಸ್ತಾನುಗಳನ್ನು ಖಾಲಿ ಮಾಡಲು ಕೆಲವೊಂದು ಎಲೆಕ್ಟ್ರಾನಿಕ್‌ ವಸ್ತುಗಳ ದರ ಪ್ರಮಾಣದಲ್ಲೂ ತೀವ್ರ ದರ ಕಡಿತದ ಕೊಡುಗೆಯನ್ನು ಘೋಷಿಸಲಾಗುತ್ತಿದೆ.

(ಸಾಂದರ್ಭಿಕ ಚಿತ್ರ)