. ನಿನ್ನೆ ರಾತ್ರಿ ತಲಘಟ್ಟಪುರ ಬಳಿಯ ಟಿಪ್ಪು ಸರ್ಕಲ್ ಕಸಾಯಿ ಖಾನೆ ಬಳಿ ಘಟನೆ ನಡೆದಿದೆ.
ಬೆಂಗಳೂರು(ಅ.15): ಗೋಹತ್ಯೆ ಬಗ್ಗೆ ದೂರು ನೀಡಿದ್ದಕ್ಕಾಗಿ ಮಹಿಳಾ ಟೆಕ್ಕಿ ಒಬ್ಬರ ಮೇಲೆ 100ಕ್ಕೂ ಹೆಚ್ಚು ಜನರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.
ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಹಿರಿಯ ಉದ್ಯೋಗಿಯಾಗಿರುವ ನಂದಿನಿ ಹಲ್ಲೆಗೊಳಗಾದ ಮಹಿಳೆ. ನಿನ್ನೆ ರಾತ್ರಿ ತಲಘಟ್ಟಪುರ ಬಳಿಯ ಟಿಪ್ಪು ಸರ್ಕಲ್ ಕಸಾಯಿ ಖಾನೆ ಬಳಿ ಘಟನೆ ನಡೆದಿದೆ. ನಂದಿನಿ ಅವರು ಗೋಹತ್ಯೆ ಬಗ್ಗೆ ದೂರು ನೀಡಿ ಇಬ್ಬರು ಪೇದೆಗಳೊಂದಿಗೆ ಸ್ಥಳಕ್ಕೆ ಹೋಗಿದ್ದರು.
ಈ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಜನರಿದ್ದ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆ ನಡೆಸುವಾಗ ಪಾಕಿಸ್ತಾನ್ ಪರ ಘೊಷಣೆ ಕೂಗಿದ್ದಾರೆ. ಗುಂಪನ್ನು ನೋಡುತ್ತಲೇ ಸ್ಥಳದಿಂದ ಪೇದೆಗಳು ಕಾಲ್ಕಿತ್ತಿದ್ದಾರೆ. ನಂದಿನಿ ಅವರ ಇನ್ನೋವಾ ಕಾರು ಸಂಪೂರ್ಣ ಜಖಂ ಆಗಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
