ಲಕ್ನೋ[ಆ.03]: ಗ್ರೇಟರ್ ನೊಯ್ಡಾದ ಶಾರದಾ ಹಾಸ್ಪಿಟಲ್ ಗೆ ಚಿಕಿತ್ಸೆ ಪಡೆಯಲು ಬಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಆಕೆ ಬದುಕುಳಿದಿದ್ದಾಳೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಯ ವಿಡಿಯೋವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಪ್ರಕರಣ ಸಂಬಮಧ ಪ್ರತಿಕ್ರಿಯಿಸಿರುವ ಶಾರದಾ ಹಾಸ್ಪಟಲ್ ಸಿಬ್ಬಂದಿ 'ಆತ್ಮಹತ್ಯೆಗೆ ಯತ್ನಿಸಿದ ಯುವತಿ ಓರ್ವ ಮಾನಸಿಕ ರೋಗಿ, ಆಕೆ ತನ್ನ ತಾಯಿಯೊಂದಿಗೆ ಜಗಳವಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ' ಎಂದಿದ್ದಾರೆ.

ಯುವತಿ ಮೊದಲು ಆಸ್ಪತ್ರೆಯ ಮಹಡಿ ಮೇಲೆ ಕುಳಿತಿದ್ದು, ಬಳಿಕ ಅಲ್ಲಿಂದ ಕೆಳಗೆ ಹಾರಲು ಯತ್ನಿಸಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಅಲ್ಲಿಗಾಗಮಿಸಿದ ವ್ಯಕ್ತಿ ಆಕೆಯ ಕೈ ಹಿಡಿದು ಬದುಕುಸಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

ಲಭ್ಯವಾದ ಮಾಹಿತಿ ಅನ್ವಯ ಯುವತಿಯನ್ನು ಆಸ್ಪತ್ರೆಯಲ್ಲೇ ದಾಖಲಿಸಿ ಚಿಕಿತ್ಸೆ ಮುಂದುವರೆಸಿದ್ದಾರೆನ್ನಲಾಗಿದೆ. ಈ ಹಿಂದೆಯೂ ಆಕೆ ಶಾರದಾ ಹಾಸ್ಪಟಲ್ ಗೆ ಚಿಕಿತ್ಸೆಗೆಂದು ಬಂದಿದ್ದಳೆಂದು ತಿಳಿದು ಬಂದಿದೆ.