ಕಡಿಮೆ ಬೆಲೆಯ ಮೊಬೈಲ್ ಫೋನ್’ಗಳಲ್ಲಿ ಜಿಪಿಎಸ್ ವ್ಯವಸ್ಥೆಯ ಬದಲಿಗೆ ಪರ್ಯಾಯ ತಂತ್ರಜ್ಞಾನ ಬಳಕೆ ಮಾಡುವ ಕುರಿತ ಹ್ಯಾಂಡ್’ಸೆಟ್ ಉತ್ಪಾದಕ ಕಂಪನಿಗಳ ಬೇಡಿಕೆಯನ್ನು ಟೆಲಿಕಾಂ ಇಲಾಖೆ ತಿರಸ್ಕರಿಸಿದೆ.

ನವದೆಹಲಿ (ಜು. 10): ಕಡಿಮೆ ಬೆಲೆಯ ಮೊಬೈಲ್ ಫೋನ್’ಗಳಲ್ಲಿ ಜಿಪಿಎಸ್ ವ್ಯವಸ್ಥೆಯ ಬದಲಿಗೆ ಪರ್ಯಾಯ ತಂತ್ರಜ್ಞಾನ ಬಳಕೆ ಮಾಡುವ ಕುರಿತ ಹ್ಯಾಂಡ್’ಸೆಟ್ ಉತ್ಪಾದಕ ಕಂಪನಿಗಳ ಬೇಡಿಕೆಯನ್ನು ಟೆಲಿಕಾಂ ಇಲಾಖೆ ತಿರಸ್ಕರಿಸಿದೆ.

ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ಮೊಬೈಲ್ ಬಳಕೆದಾರರಿರುವ ಸ್ಥಳವನ್ನು ಸುಲಭವಾಗಿ ಪತ್ತೆಹಚ್ಚುವ, ಸುರಕ್ಷತೆಯ ದೃಷ್ಟಿಯಿಂದ 2018, ಜ.1ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲ ಮೊಬೈಲ್ ಫೋನ್’ಗಳಲ್ಲೂ ಜಿಪಿಎಸ್ ವ್ಯವಸ್ಥೆ ಅಳವಡಿಸುವಂತೆ ಕಂಪನಿಗಳಿಗೆ ಸರ್ಕಾರ ನಿರ್ದೇಶಿಸಿದೆ. ಆದರೆ ಇದರಿಂದಾಗಿ ಫೀಚರ್ ಫೋನ್’ಗಳ ಬೆಲೆ ಶೇ.50ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.