ಗೌರಿ ಹಂತಕ ಆರೋಪಿಗಳಿಗೆ ಎಸ್’ಐಟಿ ಕಿರುಕುಳ..?

First Published 11, Jun 2018, 9:46 PM IST
Gowri Lankesh Murder Case: Is it SIT Really Torture  Accused
Highlights

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಶಂಕಿತ ಆರೋಪಿಗಳನ್ನು ಬಂಧಿಸಿರುವ ಎಸ್’ಐಟಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು[ಜೂ.11]: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಶಂಕಿತ ಆರೋಪಿಗಳನ್ನು ಬಂಧಿಸಿರುವ ಎಸ್’ಐಟಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗೌರಿ ಹತ್ಯೆ ನಡೆದು ಸುಮಾರು 10 ತಿಂಗಳುಗಳೇ ಕಳೆದರೂ ಇದುವರೆಗೂ ಅಪರಾಧಿ ಪತ್ತೆಯಾಗಿಲ್ಲ. ಈಗಾಗಲೇ ಎಸ್’ಐಟಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಸುಜಿತ್ ಅಲಿಯಾಸ್ ಪ್ರವೀಣ್, ಮನೋಹರ್ ದುಂಡಪ್ಪ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಲಯದ ವಿಚಾರಣೆ ಸಂದರ್ಭದಲ್ಲಿ ಆರೋಪಿ ಮನೋಹರ್ ದುಂಡಪ್ಪ ಎಸ್’ಐಟಿ ಅಧಿಕಾರಿಗಳು ತಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಚಾರಣೆಯಲ್ಲಿ ನಡೆದಿದ್ದೇನು ಎನ್ನುವುದನ್ನು ವಿವರಿಸುತ್ತಾರೆ ಸುವರ್ಣನ್ಯೂಸ್ ಪ್ರತಿನಿಧಿ ರಮೇಶ್ ಹೊಸದುರ್ಗ ಅವರ ಮಾತಿನಲ್ಲೇ ಕೇಳಿ..

loader