ವಿವಾದವನ್ನು ಹೊತ್ತುಕೊಂಡೇ ಇಂದು ನಿವೃತ್ತಿಯಾಗಿರುವ ಡಿಜಿಪಿ ಸತ್ಯನಾರಾಯನ್ ರಾವ್’ಗೆ ಸರ್ಕಾರ ಒಂದು ದಿನದ ಮಟ್ಟಿದೆ ಭರ್ಜರಿ ಗಿಫ್ಟ್ ನೀಡಿದೆ. ಕಮಾಂಡೆಂಟ್ ಜನರಲ್ ಆಫ್ ಹೋಂ ಗಾರ್ಡ್ಸ್ ಮತ್ತು  ಡೈರೆಕ್ಟರ್ ಆಫ್ ಫೈರ್ ಫೋರ್ಸ್ ಆಗಿ ನೇಮಕ ಮಾಡಿದೆ.

ಬೆಂಗಳೂರು (ಜು.31): ವಿವಾದವನ್ನು ಹೊತ್ತುಕೊಂಡೇ ಇಂದು ನಿವೃತ್ತಿಯಾಗಿರುವ ಡಿಜಿಪಿ ಸತ್ಯನಾರಾಯನ್ ರಾವ್’ಗೆ ಸರ್ಕಾರ ಒಂದು ದಿನದ ಮಟ್ಟಿದೆ ಭರ್ಜರಿ ಗಿಫ್ಟ್ ನೀಡಿದೆ. ಕಮಾಂಡೆಂಟ್ ಜನರಲ್ ಆಫ್ ಹೋಂ ಗಾರ್ಡ್ಸ್ ಮತ್ತು ಡೈರೆಕ್ಟರ್ ಆಫ್ ಫೈರ್ ಫೋರ್ಸ್ ಆಗಿ ನೇಮಕ ಮಾಡಿದೆ.

ಸತ್ಯನಾರಾಯಣ್ ರಾವ್ ಲಂಚವನ್ನು ತೆಗೆದುಕೊಂಡು ಶಶಿಕಲಾಗೆ ಜೈಲಿನಲ್ಲಿ ವಿಐಪಿ ರೀತಿಯಲ್ಲಿ ಟ್ರೀಟ್’ಮೆಂಟ್ ನೀಡಿದ್ದಾರೆ ಎಂದು ಐಪಿಎಸ್ ಅಧಿಕಾರಿ ರೂಪಾ ಆರೋಪಿಸಿದ್ದರು. ಇದನ್ನು ರಾವ್ ಖಡಾಕಂಡಿತವಾಗಿ ನಿರಾಕರಿಸಿದ್ದು ಕೋರ್ಟ್ ಆದೇಶದಂತೆ ನಡೆದುಕೊಂಡಿದ್ದೇನೆ ಎಂದು ಸಮರ್ಥನೆ ನೀಡಿದ್ದರು. ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ ಐಪಿಎಸ್ ಅಧಿಕಾರಿ ರೂಪಾ ಮೇಲೆ ರೂ.50 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿಯೂ ಕೂಡಾ ಹೇಳಿದ್ದಾರೆ.

ಸತ್ಯನಾರಾಯಣ ರಾವ್ ಮೇಲೆ ಗುರುತರವಾದ ಆರೋಪವಿದ್ದರೂ ಸರ್ಕಾರ ಅವರ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಗಂಭೀರ ಆರೋಪವಿದ್ದರೂ ಸರ್ಕಾರ ಅವರಿಗೆ ಕಮಾಂಡೆಂಟ್ ಜನರಲ್ ಆಫ್ ಹೋಂ ಗಾರ್ಡ್ಸ್ ಮತ್ತು ಡೈರೆಕ್ಟರ್ ಆಫ್ ಫೈರ್ ಫೋರ್ಸ್ ಆಗಿ ನೇಮಕ ಮಾಡಿದೆ. ನಿವೃತ್ತಿಗೂ ಮುನ್ನ ಕೆಲವೇ ಗಂಟೆಗಳ ಕಾಲ ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.