ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಈ ಬಗ್ಗೆ ಗ್ರಾಹಕರೂ ದೂರು ಸಲ್ಲಿಸಬಹುದು,’’

ನವದೆಹಲಿ(ಅ.15): ವಿಮಾನ ನಿಲ್ದಾಣ, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‌ಗಳಲ್ಲಿ ನಿಗದಿತ ವೌಲ್ಯಕ್ಕಿಂತ (ಎಂಆರ್‌ಪಿ) ಹೆಚ್ಚಿನ ಬೆಲೆಗೆ ಕುಡಿಯುವ ನೀರು ಹಾಗೂ ತಂಪು ಪಾನೀಯಗಳನ್ನು ಮಾರಾಟ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಎಚ್ಚರಿಸಿದ್ದಾರೆ. ‘‘ಎಂಆರ್‌ಪಿಗಿಂತ ಅಕ ಬೆಲೆಗೆ ಮಾರುವುದು ಕಾನೂನಿನ ಉಲ್ಲಂಘನೆ. ಆದರೆ ಕೆಲವೆಡೆ ಹೀಗೆ ಮಾಡುತ್ತಾರೆ. ಇಂತಹ ಅಕ್ರಮ ನಿಲ್ಲಬೇಕು. ಇಲ್ಲದಿದ್ದರೆ ಅವರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಸಬೇಕು,’’ ಎಂದಿದ್ದಾರೆ ಪಾಸ್ವಾನ್. ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಈ ಬಗ್ಗೆ ಗ್ರಾಹಕರೂ ದೂರು ಸಲ್ಲಿಸಬಹುದು,’’ ಎಂದಿದ್ದಾರೆ.