Asianet Suvarna News Asianet Suvarna News

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಅಂಕುಶ

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಲು ರಚಿಸಲಾಗಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ನೇತೃತ್ವದ ಸಮಿತಿ ನೀಡಿರುವ ವರದಿ ಆಧರಿಸಿ ಸೂಕ್ತ ಕಾಯ್ದೆ ಜಾರಿಗೆ ತರಲು ಕರಡು ಸಿದ್ಧಪಡಿಸಲಾಗಿದೆ. ಈ ಕರಡನ್ನು ಇದೇ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಜಾರಿಗೆ ತರಲಾಗುವುದು ಎಂದು ಹೇಳಿದರು.

Govt to regulate private hospitals charges

ಈ ಅಧಿವೇಶನದಲ್ಲೇ ಮಸೂದೆ: ಆರೋಗ್ಯ ಸಚಿವನ್ಯಾ|ವಿ.ಜೆ.ಸೇನ್‌ ಸಮಿತಿ ವರದಿ ಆಧರಿಸಿ ಕರಡು ಸಿದ್ಧ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ರೋಗಿಗಳ ಸುಲಿಗೆ ಪ್ರವೃತ್ತಿಗೆ ಕಡಿವಾಣ ಹಾಕಲು ಕಠಿಣ ನಿಯಮಗಳನ್ನೊಳÜಗೊಂಡ ಬಲಿಷ್ಠ ಕಾಯ್ದೆ ಸಿದ್ಧಪಡಿಸಲಾಗಿದ್ದು, ಇದೇ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಜಾರಿ ತರಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕಾಕ್ಲಿಯಾರ್‌ ಇಂಪ್ಲಾಂಟ್‌' ಯೋಜನೆಗೆ ಚಾಲನೆ ಹಾಗೂ 25 ಹಾಸಿಗೆಯ ಡಯಾಲಿಸಿಸ್‌ ಘಟಕಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು.

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಲು ರಚಿಸಲಾಗಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ನೇತೃತ್ವದ ಸಮಿತಿ ನೀಡಿರುವ ವರದಿ ಆಧರಿಸಿ ಸೂಕ್ತ ಕಾಯ್ದೆ ಜಾರಿಗೆ ತರಲು ಕರಡು ಸಿದ್ಧಪಡಿಸಲಾಗಿದೆ. ಈ ಕರಡನ್ನು ಇದೇ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಜಾರಿಗೆ ತರಲಾಗುವುದು ಎಂದು ಹೇಳಿದರು.

ರೋಗಿಗಳ ಆದಾಯ ಪರಿಶೀಲಿಸಿ, ಕೊಂಚ ಸ್ಥಿತಿವಂತನಾಗಿದ್ದರೂ ಸಾಕು ಅನಗತ್ಯ ಆರೋಗ್ಯ ತಪಾಸಣೆ, ಚಿಕಿತ್ಸೆಗಳನ್ನೆಲ್ಲಾ ನೀಡಿ ಕೊನೆಗೆ ಏಸಿ ವಾಹನದಲ್ಲಿ ಮನೆಗೆ ಕಳುಹಿಸಿ ಕೊಡುವ ಪ್ರವೃತ್ತಿ ಖಾಸಗಿ ಆಸ್ಪತ್ರೆಗಳ ವಲಯದಲ್ಲಿ ಕಂಡು ಬರುತ್ತಿದೆ. ಇನ್ನು ಜೀವ ಹೋದರಂತೂ ಹಣ ಕೊಡದೆ ಹೆಣ ನೀಡುವುದಿಲ್ಲ. ಜನರ ಮನಸ್ಥಿತಿಯೂ ಹಾಗೇ ಇದೆ, ಖಾಸಗಿ ಆಸ್ಪತ್ರೆಗಳು ಅನಗತ್ಯವಾಗಿ ಸುಲಿಗೆ ಮಾಡುತ್ತವೆ ಎಂದು ಗೊತ್ತಿದ್ದೂ ಮೊದಲು ಅಲ್ಲಿಗೇ ಹೋಗುತ್ತಾರೆ. ಅಲ್ಲಿ ಇದ್ದ ಹಣವನ್ನೆಲ್ಲಾ ಖಾಲಿ ಮಾಡಿಕೊಂಡು ಕಾಯಿಲೆ ವಾಸಿಯಾಗದಿದ್ದಾಗ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇಂತಹ ಎಲ್ಲ ಪ್ರವೃತ್ತಿಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನಿನ ಅಗತ್ಯವಿದೆ. ಅದಕ್ಕಾಗಿ ಬಲಿಷ್ಠ ಕಾಯ್ದೆ ಸಿದ್ಧಗೊಂಡಿದೆ. ಕಾಯ್ದೆ ಬಡವರ ಹಾಗೂ ಜನಪರವಾಗಿರುತ್ತದೆ. ಅಧಿವೇಶನ ನಡೆಯು ತ್ತಿರುವುದರಿಂದ ಕಾಯ್ದೆಯ ಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ರೋಗಿ ಕೊಂಚ ಸ್ಥಿತಿ ವಂತನಾಗಿ ದ್ದರೂ ಅನಗತ್ಯ ತಪಾಸಣೆ, ಚಿಕಿತ್ಸೆ ನೀಡಿ ಎ.ಸಿ. ವಾಹನದಲ್ಲಿ ಮನೆಗೆ ಕಳಿಸುವ ಪ್ರವೃತ್ತಿ ಖಾಸಗಿ ಆಸ್ಪತ್ರೆಗಳಲ್ಲಿ ಕಂಡು ಬರುತ್ತಿದೆ. ಹಣ ಕೊಡದೆ ಹೆಣ ನೀಡದಿರುವ ಚಾಳಿಯೂ ಇದೆ. ಇಂತಹದ್ದಕ್ಕೆ ಕಡಿವಾಣ ಹಾಕಲು ನ್ಯಾ|ವಿಕ್ರಂಜಿತ್‌ ಸೇನ್‌ ಸಮಿತಿ ನೀಡಿದ ವರದಿ ಆಧಾರದಲ್ಲಿ ಕರಡು ಮಸೂದೆ ಸಿದ್ಧವಾಗಿದೆ. ಇದೇ ಅಧಿವೇಶನದಲ್ಲಿ ಮಂಡನೆಯಾಗಿ ಜಾರಿಯಾಗಲಿರುವ ಕಾಯ್ದೆ ಬಡವರ ಹಾಗೂ ಜನಪರವಾಗಿರುತ್ತದೆ.
ರಮೇಶ್‌ ಕುಮಾರ್‌ ಆರೋಗ್ಯ ಸಚಿವ

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಅಪಪ್ರಚಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಿದ್ದರೂ, ಸುಳ್ಳು ಅಪಪ್ರಚಾರ ನಡೆಸಲು ಒಂದು ಮಾಫಿಯಾವೇ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಸಣ್ಣ ತೊಂದರೆ ಯಾದರೆ ಸಾಕು ಅದನ್ನೇ ದೊಡ್ಡದು ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿರದಂತೆ ನೋಡಿಕೊಳ್ಳುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮೊದಲು ಸರ್ಕಾರಿ ಆಸ್ಪತ್ರೆಗೆ ಬರುವುದನ್ನು ಕಲಿಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ 1300 ರು. ವರೆಗೆ ಹಣ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಮೊತ್ತ ಕಡಿಮೆ ಇದೆ. ಇನ್ನು ಕೆಲವೇ ದಿನಗಳಲ್ಲಿ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೇವೆ ಆರಂಭವಾಗಲಿದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ಮಾತನಾಡಿ, ಶ್ರವಣ ದೋಷ ಮುಕ್ತ ರಾಜ್ಯವಾಗಿಸುವ ದೃಷ್ಟಿಯಿಂದ ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿಯಲ್ಲಿ ಕಾಕ್ಲಿಯಾರ್‌ ಇಂಪ್ಲಾಂಟ್‌ ಯೋಜನೆ ಜಾರಿಗೆ ತರಲಾಗಿದೆ. ಕೆ.ಸಿ.ಜನರಲ್‌ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಸಂಸ್ಥೆ, ಮಂಗಳೂರು ಆಸ್ಪತ್ರೆಗಳಲ್ಲಿ ಇಂತಹ ಸೌಲಭ್ಯಗಳಿದೆ. 6 ತಿಂಗಳಿನಿಂದ 3 ವರ್ಷದೊಳಗಿನ ಶ್ರವಣ ದೋಷವುಳ್ಳ ಮಕ್ಕಳಿಗೆ ಕಾಕ್ಲಿಯಾರ್‌ ಇಂಪ್ಲಾಂಟ್‌ ಮಾಡಿದರೆ ಶ್ರವಣದೋಷ ಗುಣಮುಖವಾಗುತ್ತದೆ. 6 ವರ್ಷದ ನಂತರ ಥೆರಪಿ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ. ಹಾಗಾಗಿ ಚಿಕ್ಕಂದಿನಲ್ಲೇ ಜನರು ಇದರ ಸದುಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ದಿನೇಶ್‌ ಗುಂಡೂರಾವ್‌ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಉಮೇಶ್‌ ಜಿ. ಜಾಧವ್‌, ಬಿಬಿಎಂಪಿ ಸದಸ್ಯ ಆರ್‌.ಎಸ್‌. ಸತ್ಯನಾರಾಯಣ, ಇಲಾಖೆ ಆಯುಕ್ತ ಶುಭೋದ್‌ ಯಾದವ್‌. ಕೆ.ಸಿ. ಜನರಲ್‌ ಆಸ್ಪತ್ರೆಯ ಅಧೀಕ್ಷಕ ಡಾ. ಎಚ್‌. ರವಿಕುಮಾರ್‌ ಹಾಗೂ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios