ಬೆಂಗಳೂರು(ಸೆ.21): ರಾಜ್ಯದ ಇತಿಹಾಸದಲ್ಲಿ ದಾಖಲಾಗುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತುರ್ತು ಸಚಿವ ಸಂಪುಟದ ನಂತರ ತೆಗೆದುಕೊಂಡರು.
ಸರ್ವಾನುಮತದಿಂದ ಅಂಗೀಕರಿಸಲಾದ ನಿರ್ಣಯದ ಸಾಲುಗಳು ಹೀಗಿವೆ
''ಮಾನ್ಯ ಸರ್ವೋಚ್ಛ ನ್ಯಾಯಾಲಯವು 20/09/2016 ರಂದು ನೀಡಿದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸರ್ಕಾರವು ಇಂದು ಕರೆದ ಸರ್ವಪಕ್ಷ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು. ಸರ್ವಪಕ್ಷ ಸಭೆಯಲ್ಲಿ ತಕ್ಷಣ ಉಬಯ ಸದನಗಳ ಸಭೆಯಲ್ಲಿ ಕರೆಯಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ 23/09/2016 ರಂದು ಬೆಳಿಗ್ಗೆ 11 ಗಂಟೆಗೆ ಉಬಯ ಸದನಗಳ ಸಭೆ ಕರೆಯುವಂತೆ ಘನತವೆತ್ತ ರಾಜ್ಯಪಾಲರನ್ನು ಕೋರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಉಬಯ ಸದನಗಳಲ್ಲಿ ತೀರ್ಮಾನವಾಗುವವರೆಗೂ ತಮಿಳುನಾಡಿಗೆ ನೀರು ಬಿಡುವ ವಿಚಾರವನ್ನು ಮುಂದೂಡಲಾಯಿತು'.
ಸರ್ವಪಕ್ಷ ಸಭೆಯಲ್ಲಿ ಜೆಡಿಎಸ್ ರಾಷ್ಟ್ರದ್ಯಕ್ಷ ಹೆಚ್.ಡಿ. ದೇವೇಗೌಡ, ಕಾರ್ಯಧ್ಯಕ್ಷ ಕುಮಾರಸ್ವಾಮಿ, ಸರ್ವೋದಯ ಪಕ್ಷದ ಕೆ.ಎಸ್.ಪುಟ್ಟಣ್ಣಯ್ಯ ಭಾಗವಹಿಸಿದ್ದರು.
