ಬೆಂಗಳೂರು (ಸೆ.21)ಕೊನೆಗೂ ಸರ್ಕಾರದ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ತಮಿಳುನಾಡಿಗೆ ನೀರು ಬಿಡದಿರಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರದ ದಿಟ್ಟ ತೀರ್ಮಾನವಾಗಿದ್ದು ಸರ್ವಪಕ್ಷ ಸಭೆ ಬಳಿಕ ಅಂತಿಮ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ತುರ್ತು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ಮುದ್ರೆ ಹಾಕಲಾಗಿದೆ.
ಈ ಬಗ್ಗೆ ಶನಿವಾರ ಒಂದು ದಿನ ವಿಶೇಷ ಅಧಿವೇಶನ ನಡೆಸಲಾಗುತ್ತದೆ. ಅಧಿವೇಶನದಲ್ಲಿ ನೀರು ಬಿಡದಿರುವಂತೆ ನಿರ್ಣಯ ಮಂಡನೆ ಮಾಡಲಾಗುತ್ತದೆ. ಸರ್ವಾನುಮತದ ಅಂಗೀಕಾರ ಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನಾತ್ಮಕ ಸವಾಲುಗಳನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ.
