ಬೀದಿ ನಾಯಿಗಳ ಹಿಡಿಯುವ ನೆಪದಲ್ಲಿ ಬಿಬಿಎಂಪಿಯಲ್ಲಿ ಕೋಟಿ-ಕೋಟಿ ಹಣ ಲೂಟಿ ಮಾಡುತ್ತಿರುವ ಪ್ರಕರಣ ಕುರಿತಂತೆ ಸುವರ್ಣ ನ್ಯೂಸ್ ವರದಿಯಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.
ಬೆಂಗಳೂರು (ಅ.10): ಬೀದಿ ನಾಯಿಗಳ ಹಿಡಿಯುವ ನೆಪದಲ್ಲಿ ಬಿಬಿಎಂಪಿಯಲ್ಲಿ ಕೋಟಿ-ಕೋಟಿ ಹಣ ಲೂಟಿ ಮಾಡುತ್ತಿರುವ ಪ್ರಕರಣ ಕುರಿತಂತೆ ಸುವರ್ಣ ನ್ಯೂಸ್ ವರದಿಯಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.
ಇಂದು ಮೇಯರ್ ಸಂಪತ್ ರಾಜ್ ಪಾಲಿಕೆಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಗರದಲ್ಲಿ ಬೀದಿ ನಾಯಿಗಳನ್ನು ಹಿಡಿದಿರುವ ಸಂಖ್ಯೆ, ಖರ್ಚು ಮಾಡಿರುವ ಹಣದ ಸಮಗ್ರ ಮಾಹಿತಿ ನೀಡುವಂತೆ ಮೇಯರ್ ಸೂಚನೆ ನೀಡಿದ್ದಾರೆ. ಮೂರು ದಿನದಲ್ಲಿ ಸಂಪೂರ್ಣ ಡಿಟೇಲ್ಸ್ ಇರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿರುವ ಮೇಯರ್ ನಾಯಿ ಹಿಡಿಯುವ ಹೆಸರಿನಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನೀಡಿರುವ ಬೋಗಸ್ ಲೆಕ್ಕ ಹಾಗೂ ಶಸ್ತ್ರ ಚಿಕಿತ್ಸೆ ಹೆಸರಲ್ಲಿ ನಡೆಯುತ್ತಿರುವ ಮಹಾ ಮೋಸದ ಪತ್ತೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ನಗರದ ವಿವಿಧ ಭಾಗದಲ್ಲಿ ರಿಯಾಲಿಟಿ ಚೆಕ್ ಮಾಡಿತ್ತು. ಆ ವೇಳೆ ನಾಯಿ ಹಿಡಿಯುವ ಹೆಸರಲ್ಲಿ ಬಹುಕೋಟಿ ಹಗರಣ ಪಾಲಿಕೆಯಲ್ಲಿ ನಡೆಯುತ್ತಿರುವ ಬಗ್ಗೆ ವರದಿ ಮಾಡಿತ್ತು. ವರದಿ ಫಲಶೃತಿಯಂತೆ ಮೇಯರ್ ಲೆಕ್ಕ ತರಿಸಿಕೊಳ್ಳಲು ಮುಂದಾಗಿದ್ದಾರೆ.
