ನಟಿ ಭಾವನಾಗೆ ಇದೀಗ ಸಂಕಷ್ಟ ಎದುರಾಗಿದೆ.  60 ಲಕ್ಷಗಳನ್ನು ಬಳಕೆ ಕುರಿತು ಮಾಹಿತಿ ಒದಗಿಸುವಂತೆ ಹೂವು ಫೌಂಡೇ ಷನ್ ಅಧ್ಯಕ್ಷೆ, ನಟಿ ಭಾವನಾ ರಾಮಣ್ಣ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು: ಸಾಂಸ್ಕೃತಿಕ ಚಟುವಟಿಕೆ ನಡೆಸುವ ಉದ್ದೇಶದಿಂದ ಬಿಡುಗಡೆ ಮಾಡ ಲಾಗಿದ್ದ 60 ಲಕ್ಷಗಳನ್ನು ಬಳಕೆ ಕುರಿತು ಮಾಹಿತಿ ಒದಗಿಸುವಂತೆ ಹೂವು ಫೌಂಡೇ ಷನ್ ಅಧ್ಯಕ್ಷೆ, ನಟಿ ಭಾವನಾ ರಾಮಣ್ಣ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಚನೆ ನೀಡಿದೆ.
ನೃಪತುಂಗ ರಸ್ತೆಯ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಕೈ ಹಾಕಿರುವ ನಟಿ ಭಾವನಾ ಅವರ ಕ್ರಮ ವಿವಾದಕ್ಕೆ ಕಾರಣವಾಗಿತ್ತು.

ಈ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಬಳಕೆ ಕುರಿತು ಮಾಹಿತಿ ಕೋರಿದ್ದು, ಭಾವನಾ ಅವರು ಅನುದಾನ ದುರ್ಬಳಕೆ ಮಾಡಿಕೊಂಡಿ ದ್ದಾರೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ. 2017- 18ನೇ ಸಾಲಿನಲ್ಲಿ ಭಾವ ನಾ ರಾಮಣ್ಣ ಅಧ್ಯಕ್ಷತೆಯ ಹೂವು ಫೌಂಡೇಷನ್‌ಗೆ ಮಾರ್ಚ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾ ಖೆ ಸಾಂಸ್ಕೃ ತಿಕ ಚಟುವಟಿಕೆ ಉದ್ದೇಶ ದಿಂದ 60 ಲಕ್ಷ ಮಂಜೂ ರು ಮಾಡಿತ್ತು. 

ಈ ಹಣವನ್ನು ಭಾವನಾ ಅವರು ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಉನ್ನತ ಶಿಕ್ಷಣ ಇಲಾಖೆ ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೋಟಿಸ್ ನೀಡಿ ಬಯಲುರಂಗ ಮಂದಿರ ನಿರ್ಮಾಣಕ್ಕೆ ಅನುದಾನ ನೀಡಿರುವ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಕರೆದ ಸಭೆಗೆ ಹಾಜರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಭಾವನಾ ರಾಮಣ್ಣ ಅವರಿಗೆ ಕಟ್ಟಡ ನಿರ್ಮಾಣಕ್ಕೆಂದು ಇಲಾಖೆಯಿಂದ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂಬುನ್ನು ಸ್ಪಷ್ಟಪಡಿಸಿದ್ದಾರೆ. 

ಅಲ್ಲದೇ ಭಾವನಾ ಅವರಿಗೆ ಸಾಂಸ್ಕೃತಿಕ ಚಟುವಟಿಕೆಗೆಂದು ಅನುದಾನ ನೀಡಲಾಗಿತ್ತು. ಅವರು ಪಡೆದ ಅನುದಾನದ ಬಳಕೆ ಕುರಿತು ಶೀಘ್ರವೇ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದೆ ಎಂದು ಇಲಾಖೆ ಜಂಟಿ ನಿರ್ದೇಶಕಿ ಬನಶಂಕರಿ ವ್ಹಿ ಅಂಗಡಿ ತಿಳಿಸಿದ್ದಾರೆ.