ಜೈಪುರ(ಸೆ.10): ಲೈಂಗಿಕ ದೌರ್ಜನ್ಯ ಕುರಿತು ಮಕ್ಕಳಲ್ಲಿ ತಿಳವಳಿಕೆ ಮೂಡಿಸಲು ಸರ್ಕಾರಿ ಶಾಲೆಗಳಲ್ಲಿ ಈ ಕುರಿತು ಪಠ್ಯ ಸೇರಿಸಲು ರಾಜಸ್ಥಾನ ಸರ್ಕಾರ ಮುಂದಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರತೀ ಶನಿವಾರ ಲೈಂಗಿಕ ದೌರ್ಜನ್ಯದ ಕುರಿತು ಪಾಠ ಹೇಳಿಕೊಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

‘Joyful Saturday’ ಎಂಬ ಯೋಜನೆಯಡಿ ತಿಂಗಳಿನ ಎರಡನೇ ಮತ್ತು ನಾಲ್ಕನೇ ಶನಿವಾರ ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ಜಾಗೃತಿ ಮೂಡಿಲಾಗುವುದು. ಒಂದನೇ ತರಗತಿಯಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಈ ವಿಶೇಷ ಬೋಧನಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 1 ರಿಂದ ೫ನೇ ತರಗತಿ, 6 ರಿಂದ 9ನೇ ತರಗತಿ ಮತ್ತು 10 ರಿಂದ 12ನೇ ತರಗತಿ ಎಂದು ವಿಂಗಡನೆ ಮಾಡಲಾಗಿದ್ದು, ತಿಂಗಳಿಗೆ ಎರಡು ಬಾರಿ ಶಿಬಿರಗಳನ್ನು ಆಯೋಜಿಸಲಾಗುವುದು.

ಅಲ್ಲದೇ ಈ ವಿಶೇಷ ಶಿಬಿರಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಲು ಎಲ್ಲಾ ಸರ್ಕಾರಿ ಶಾಲೆಗಳಿಗೆ ಹೆಚ್ಚವರಿ 1000 ರೂ. ಅನುದಾನ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಘೋಷಿಸಿದೆ.