ಬಾಲಾಕೋಟ್ ವಾಯದಾಳಿ ಬಳಿಕ ಒಳನುಸುಳುವಿಕೆ ಕಡಿಮೆ: ಕೇಂದ್ರ
ಬಾಲಾಕೋಟ್ ದಾಳಿ ಬಳಿಕ ಏನಾಗಿದೆ ಅಂತಿದ್ದವರಿಗೆ ಕೇಂದ್ರದ ಉತ್ತರ| ವಾಯುದಾಳಿ ಬಳಿಕ ಉಗ್ರರ ಒಳನುಸುಳುವಿಕೆ ಕಡಿಮೆ| ಶೇ.43ರಷ್ಟು ಒಳನುಸುಳುವಿಕೆ ಕಡಿಮೆಯಾಗಿದೆ ಎಂದ ಕೇಂದ್ರ| ಲೋಕಸಭೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಾಹಿತಿ|
ನವದೆಹಲಿ(ಜು.09): ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ನಡೆಸಿದ್ದ ಬಾಲಾಕೋಟ್ ವಾಯುದಾಳಿಯ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಜೈಷ್ ಎ ಮೊಹಮದ್ ಉಗ್ರರ ತರಬೇತಿ ಕೇಂದ್ರ ಮತ್ತು ನೆಲೆಗಳ ಮೇಲೆ ನಡೆಸಿದ ವಾಯುದಾಳಿ ಬಳಿಕ, ಭಾರತದೊಳಗೆ ಪಾಕಿಸ್ತಾನ ಉಗ್ರರು ನುಸುಳುವ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಈ ಕುರಿತು ಸದನಕ್ಕೆ ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಬಾಲಾಕೋಟ್ ದಾಳಿ ಬಳಿಕ ಉಗ್ರರ ಒಳನುಸುಳುವಿಕೆ ಪ್ರಮಾಣ ಶೇ. 43ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.
Net infiltration in J-K reduced by 43%: MHA in Lok Sabha
— ANI Digital (@ani_digital) July 9, 2019
Read @ANI Story| https://t.co/Anj65gNE9Y pic.twitter.com/7BUvDIhYx5
ಕಣಿವೆಯಲ್ಲಿ ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದು, ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ನುಸುಳದಂತೆ ತಡೆಯಲು ವಿವಿಧ ಹಂತದಲ್ಲಿ ಸೇನೆ ನಿಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.